ಬೆಂಗಳೂರು: ವರ್ಟಿಕಲ್ ಟ್ರಾನ್ಸ್ಪೋರ್ಟೇಶನ್ ಕ್ಷೇತ್ರದಲ್ಲಿ ಪ್ರತಿಭೆಗಳಿಗೆ ಕೌಶಲ ತರಬೇತಿ ನೀಡಲು ಎಲಿವೇಟರ್ ಮತ್ತು ಎಸ್ಕಲೇಟರ್ ಉದ್ಯಮದ ಜಾಗತಿಕ ಸಂಸ್ಥೆಗಳಾದ ಕೋನೆ ಎಲಿವೇಟರ್ಸ್ ಹಾಗೂ ಮಾ ಫೋಯ್ ಫೌಂಡೇಷನ್ ನಡುವೆ ಒಪ್ಪಂದ ಆಗಿದೆ.

ಕೋನೆ ಸಂಸ್ಥೆಯ ಸಿಎಸ್ಆರ್ ಯೋಜನೆಯ ಭಾಗವಾಗಿ 150 ಯುವ ಜನರಿಗೆ ಲಿಫ್ಟ್ ಅಳವಡಿಕೆ ಮತ್ತು ಉದ್ಯಮಕ್ಕೆ ಪೂರಕವಾದ ಕೌಶಲ ತರಬೇತಿ ನೀಡಿ, ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ.

ಹಿರಿಯ ನಿರ್ದೇಶಕ ಎಂ.ಪಿ. ಸರವಣನ್ ಮಾತನಾಡಿ, ‘ನುರಿತ ಕಾರ್ಯಪಡೆಯನ್ನು ರೂಪಿಸುವುದು ಕೇವಲ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಮಾತ್ರವಲ್ಲ, ಮುಂದಿನ ಪೀಳಿಗೆಯ ಪ್ರತಿಭೆಗಳ ಸಬಲೀಕರಣಕ್ಕೂ ಬಹಳ ಅತ್ಯಗತ್ಯ’ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಮಾ ಫೋಯ್ ಫೌಂಡೇಷನ್ನ ಸಿಎಸ್ಆರ್ ಮುಖ್ಯಸ್ಥೆ ರೋವೆನಾ ಸ್ಕರ್ವಿಲ್, ‘ಕೌಶಲ ಅಭಿವೃದ್ಧಿಯು ಸುಸ್ಥಿರ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಅಡಿಪಾಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.