ಬೆಂಗಳೂರು: ಅಂಗವಿಕಲರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ ತರಬೇತಿ ನೀಡುತ್ತಿದ್ದು, ಈ ವರ್ಷ 100 ಅಂಗವಿಕಲರು ಉತ್ತೀರ್ಣರಾಗಿ ಪದವಿ ಪಡೆದಿದ್ದಾರೆ.

ನಗರದಲ್ಲಿ ನಡೆದ ಘಟಿಕೋತ್ಸವದಲ್ಲಿ ನೂರು ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ಡಿಯಾಜಿಯೊ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪ್, ‘ದೈಹಿಕ ವೈಕಲ್ಯ ಇರುವವರಲ್ಲೂ ಕೌಶಲ ಇರುತ್ತದೆ. ಅವರಿಗೆ ಸೂಕ್ತ ತರಬೇತಿ ನೀಡಿದರೆ, ತಮ್ಮ ಸ್ವ ಪ್ರಯತ್ನದಿಂದಲೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಹೀಗಾಗಿ ಅವರಿಗೂ ಸೂಕ್ತ ಕೌಶಲ ತರಬೇತಿ ನೀಡುವುದು ಅನಿವಾರ್ಯ. ಕೌಶಲ ಮಂಡಳಿಯ ಸಹಯೋಗದಲ್ಲಿ ಆಸಕ್ತರಿಗೆ ಎಫ್ ಆಂಡ್ ಬಿ ಸರ್ವಿಸಸ್, ಹಾಸ್ಪಿಟಾಲಿಟಿ ಆಪರೇಷನ್ಸ್, ಕಸ್ಟಮರ್ ಸರ್ವಿಸ್, ಸಾಫ್ಟ್ ಸ್ಕಿಲ್ಸ್ ಸೇರಿದಂತೆ ಹಲವು ರೀತಿಯ ತರಬೇತಿ ನೀಡಲಾಗುತ್ತಿದೆ. ಅರ್ಹ ತರಬೇತುದಾರರು ತರಬೇತಿ ನೀಡುವರು ಎಂದರು.

ಪ್ರಸಕ್ತ ಸಾಲಿನಲ್ಲಿ 100 ಅಂಗವಿಕಲರಿಗೆ ಪದವಿ ಪ್ರದಾನ ಮಾಡಲಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಮಂದಿ ಇದರ ಪ್ರಯೋಜನ ಪಡೆದುಕೊಂಡು ತಮ್ಮ ಸ್ವಂತ ಶಕ್ತಿಯಿಂದಲೇ ಜೀವನ ನಡೆಸುವ ಸಾಮರ್ಥ್ಯ ಬೆಳೆಸಲಾಗುವುದು ಎಂದು ಹೇಳಿದರು.

ದೇಶದಾದ್ಯಂತ ಈ ರೀತಿಯ ತರಬೇತಿ ನೀಡಲಾಗುತ್ತಿದ್ದು, ಈ ಕೇಂದ್ರದಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ಅಂಗವಿಕಲರಿಗೆ ಉದ್ಯೋಗ ಖಾತ್ರಿ ನೀಡಲಾಗುತ್ತಿದೆ. ಇದಕ್ಕಾಗಿ ಸಾಕಷ್ಟು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅರ್ಹ ಪದವೀಧರರಿಗೆ ಉದ್ಯೋಗ ಕೂಡ ದೊರೆಯಲಿದೆ ಎಂದರು.ಬೆಂಗಳೂರು: ವಿಕಲಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ ನೀಡುತ್ತಿದ್ದು, ಈ ವರ್ಷದಲ್ಲಿ 100 ವಿಕಲಚೇತನರು ಪದವಿ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.

ನಗರದಲ್ಲಿ ನಡೆದ ಘಟಿಕೋತ್ಸವದಲ್ಲಿ ಉತ್ತೀರ್ಣ ವಿಕಲಚೇತನರಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿಯಾಜಿಯೊ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪ್, ‘ದೈಹಿಕ ವೈಕಲ್ಯ ಇರುವವರಲ್ಲೂ ಕೌಶಲ್ಯ ಇರುತ್ತದೆ. ಅವರಿಗೆ ಸೂಕ್ತ ತರಬೇತಿ ನೀಡಿದರೆ, ತಮ್ಮ ಸ್ವಪ್ರಯತ್ನದಿಂದಲೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಇದಕ್ಕಾಗಿ ಅವರಿಗೂ ಸೂಕ್ತ ಕೌಶಲ್ಯ ತರಬೇತಿ ನೀಡುವುದು ಅನಿವಾರ್ಯ’ ಎಂದಿದ್ದಾರೆ.

‘ಕೌಶಲ್ಯ ಮಂಡಳಿಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಸಕ್ತ ವಿಕಲಚೇತರಿಗೆ ಎಫ್&ಬಿ ಸರ್ವಿಸಸ್, ಹಾಸ್ಪೆಟಾಲಿಸಿ ಆಪರೇಷನ್ಸ್, ಕಸ್ಟಮರ್ ಸರ್ವಿಸ್, ಸಾಫ್ಟ್ ಸ್ಕಿಲ್ಸ್ ಸೇರಿದಂತೆ ಹಲವು ರೀತಿಯ ತರಬೇತಿ ನೀಡಲಾಗುತ್ತಿದೆ. ವಿಕಲಚೇತರಿಗೆ ಅರ್ಹ ತರಬೇತುದಾರರಿಂದ ತರಬೇತಿ ಕೊಡಿಸಲಾಗುತ್ತಿದೆ. ಈ ಶೈಕ್ಷಣಿಕ ಸಾಲಿನಲ್ಲಿ 100 ವಿಕಲಚೇತನರಿಗೆ ಪದವಿ ವಿತರಿಸಲಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ವಿಕಲಚೇತನರು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಸ್ವಶಕ್ತಿಯಿಂದಲೇ ಜೀವನ ನಡೆಸುವ ಸಾಮರ್ಥ್ಯ ನಿರ್ಮಿಸಿಕೊಡಲಾಗುವುದು’ ಎಂದು ಹೇಳಿದ್ದಾರೆ.

ದೇಶದಾದ್ಯಂತ ತರಬೇತಿ ನೀಡಲಾಗಿದ್ದು, ಈ ಕೇಂದ್ರದಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ವಿಕಲಚೇತನರಿಗೆ ಉದ್ಯೋಗ ಖಾತ್ರಿಯನ್ನೂ ನೀಡಲಾಗುತ್ತಿದೆ. ಇದಕ್ಕಾಗಿ ಸಾಕಷ್ಟು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅರ್ಹ ಪದವೀಧರರಿಗೆ ಉದ್ಯೋಗ ಕೂಡ ದೊರೆಯಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.