ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಪೋಸ್ಟ್ ಕಿಯೊಸ್ಕ್: ಅಂಚೆ ಸೇವೆ ಸುಲಭ

Last Updated 28 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ನಗರದ ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯಲ್ಲಿ ಸ್ಮಾರ್ಟ್‌ ಪೋಸ್ಟ್ ಕಿಯೊಸ್ಕ್ ಯಂತ್ರವನ್ನು ಬುಧವಾರ ಅನಾವರಣಗೊಳಿಸಿದೆ.

ಇದರಿಂದಾಗಿ ಸ್ಪೀಡ್ ‍ಪೋಸ್ಟ್ ಹಾಗೂ ನೋಂದಾಯಿತ ಪೋಸ್ಟ್ ಸೇವೆಗೆ ಅಂಚೆ ಕಚೇರಿಗಳಿಗೆ ತೆರಳಿ, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲು ವುದು ತಪ್ಪಲಿದೆ. ಇದರ ಸೇವೆ ಪಡೆಯಲು ‘ಸ್ಮಾರ್ಟ್ ಕಿಯೊಸ್ಕ್
ಆ್ಯಪ್‌’ ಅನ್ನು ಕೂಡ ಅಭಿವೃದ್ಧಿಪಡಿಸ ಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ.

‘ಮೊಬೈಲ್‌ ಆ್ಯಪ್‌ನಲ್ಲಿ ವಿಳಾಸ ಭರ್ತಿ ಮಾಡಿದ ಬಳಿಕ ಆರು ಅಂಕಿಯ ಕೋಡ್ ಸೃಷ್ಟಿಯಾಗಲಿದೆ. ಕಿಯೊಸ್ಕ್ ಯಂತ್ರದಲ್ಲಿ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಳಿಸುವ ಪತ್ರದ ಪ್ರಕಾರವನ್ನು ಆಧರಿಸಿ ಬಾರ್‌
ಕೋಡ್ ಅನ್ನು ಯಂತ್ರವು ರಚಿಸುತ್ತದೆ. ಅದನ್ನು ಪತ್ರಕ್ಕೆ ಅಂಟಿಸಿ, ಯಂತ್ರದ ನೆರವಿನಿಂದ ಸ್ಕ್ಯಾನ್ ಮಾಡಿದಲ್ಲಿ ಮುಚ್ಚಳವು
ತೆರೆದುಕೊಳ್ಳುತ್ತದೆ. ಅದರಲ್ಲಿ ಪತ್ರವನ್ನು ಹಾಕಿದ ಬಳಿಕ ದೂರ, ತೂಕದ ಆಧಾರದ ಮೇಲೆ ಯಂತ್ರವು ದರವನ್ನು ಪ್ರದರ್ಶಿಸುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕಿಯೊಸ್ಕ್‌ನ ಪರದೆ ಮೇಲೆ ಕಾಣಿಸುವ ಕ್ಯೂಆರ್ ಕೋಡ್‌ ಅನ್ನು ಸ್ಕ್ಯಾನ್ ಮಾಡುವ ಮೂಲಕ ಗೂಗಲ್ ಪೇ, ಪೋನ್ ಪೇ ಸೇರಿದಂತೆ ವಿವಿಧ ಡಿಜಿಟಲ್ ಹಣ ಪಾವತಿ ಮೊಬೈಲ್ ಆ್ಯಪ್‌ಗಳ ನೆರವಿನಿಂದ ಶುಲ್ಕ ಪಾವತಿಸಬಹುದು. ಈ ಪ್ರಕ್ರಿಯೆ ಮುಗಿದ ಬಳಿಕ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಹಾಗೂ ಇ ಮೇಲ್ ವಿಳಾಸಕ್ಕೆ ರಶೀದಿಯ ಪ್ರತಿ ಬರಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT