ಬೆಂಗಳೂರು: ‘ದಲಿತರಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವವರೆಗೆ ಕೆನೆಪದರ ನೀತಿಯ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೀ ಕಲ್ಚರ್ ಪ್ರಕಾಶನ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೇತ್ರತಜ್ಞ ಡಾ.ಬಿ.ಎಂ. ತಿಪ್ಪೇಸ್ವಾಮಿ ಅವರ ಬದುಕಿನ ಕುರಿತು ಬಿ.ಟಿ. ಜಾಹ್ನವಿ ಅವರು ಸಂಪಾದಿಸಿರುವ ‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.

‘1985ರ ಅವಧಿಯಲ್ಲಿ ಶಾಸಕರೂ ಆಗಿದ್ದ ತಿಪ್ಪೇಸ್ವಾಮಿ ಅವರು, ಮೀಸಲಾತಿ ಸೌಲಭ್ಯ ಪಡೆದವರೇ ಮತ್ತೆ ಪಡೆಯುತ್ತಾರೆ ಎಂಬ ಕಾರಣಕ್ಕೆ ಕೆನೆಪದರ ಅಗತ್ಯವಿಲ್ಲ ಎಂದಿದ್ದರು. ಅವರ ದೃಷ್ಟಿಕೋನದಲ್ಲಿ ಅದು ಸರಿ ಇರಬಹುದು. ಆದರೆ, ದಲಿತರಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಹೊರಹೊಮ್ಮಿಲ್ಲ. ಆದ್ದರಿಂದ ಸಾಮಾಜಿಕ ನ್ಯಾಯ ಸಿಗುವವರೆಗೆ ಕೆನೆಪದರ ನೀತಿ ಅಗತ್ಯ’ ಎಂದರು.

‘ಸಂವಿಧಾನದ ಸವಲತ್ತುಗಳನ್ನು ಪಡೆದವರು ಆ ಜನಾಂಗದವರ ಅಭಿವೃದ್ಧಿಗೆ ಕೆಲಸ ಮಾಡುವುದು ಕಡಿಮೆ. ಆದರೆ, ತಿಪ್ಪೇಸ್ವಾಮಿ ಅವರು ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಅವರು ಜನಪರ ವಿಚಾರಗಳಲ್ಲಿ ಮುಲಾಜಿಲ್ಲದೆ ಮಾತನಾಡುತ್ತಿದ್ದರು. ಸತ್ಯವನ್ನು ಅತ್ಯಂತ ನಿಷ್ಠುರವಾಗಿ ಹೇಳುತ್ತಿದ್ದರು. ಈ ಕಾರಣಕ್ಕಾಗಿ ಅವರು ಹಲವು ಬಾರಿ ಸಮಸ್ಯೆಗೆ ಸಿಲುಕಿಕೊಂಡಿದ್ದರು’ ಎಂದು ಹಳೆಯ ಘಟನೆಗಳನ್ನು ಸ್ಮರಿಸಿಕೊಂಡರು.

ಮಾಜಿ ಸಚಿವ ಎಚ್. ಆಂಜನೇಯ, ‘ದಾವಣಗೆರೆಯ ವಿದ್ಯಾನಗರವನ್ನು ನಿರ್ಮಾಣ ಮಾಡಿದವರು ತಿಪ್ಪೇಸ್ವಾಮಿ. ಈಗ ಅದು ಪ್ರತಿಷ್ಠಿತ ಬಡಾವಣೆಯಾಗಿದೆ. ಶಿಕ್ಷಣಕ್ಕೂ ಅವರು ಪ್ರೋತ್ಸಾಹ ನೀಡಿದ್ದರು’ ಎಂದು ಹೇಳಿದರು.

ಭಾರತ್ ಸ್ಕೌಟ್ ಅಂಡ್ ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ‘ತಿಪ್ಪೇಸ್ವಾಮಿ ಅಂತಹವರು ರಾಜಕೀಯ ಕ್ಷೇತ್ರದಲ್ಲಿ ಅಪರೂಪ. ಕೆಲವರು ಅವರನ್ನು ಉಪಯೋಗಿಸಿಕೊಂಡು ಬೆಳೆದರು’ ಎಂದರು.

ಕೃತಿಯ ಸಂಪಾದಕಿ ಬಿ.ಟಿ. ಜಾಹ್ನವಿ, ‘ತಿಪ್ಪೇಸ್ವಾಮಿ ಕುಟುಂಬದವರು, ಒಡನಾಡಿಗಳು ಹಾಗೂ ಶಿಷ್ಯರು ಬರೆದ ಲೇಖನಗಳ ಸಂಗ್ರಹ ಇದಾಗಿದೆ. ಕರ್ನಾಟಕದ ಹೊಸ ತಲೆಮಾರಿನ ಓದುಗರಿಗೆ ಈ ಪುಸ್ತಕ ಮುಖ್ಯ’ ಎಂದು ಹೇಳಿದರು.

ಕೃತಿಯ ಬಗ್ಗೆ ದು.ಸರಸ್ವತಿ ಹಾಗೂ ವಿ.ಎಲ್. ನರಸಿಂಹಮೂರ್ತಿ ಮಾತನಾಡಿದರು. ಕವಿ ಎಲ್. ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.