ಬೆಂಗಳೂರು: ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಹಾಗೂ ಸಮಾಜದಲ್ಲಿ ಮಹಿಳೆ ಯರು ಎದುರಿಸುತ್ತಿರುವ ಕಾನೂನಿನ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ನೀಡುವ ಸೋಜ್ ಕೇಂದ್ರಕ್ಕೆ ರೀಚ್ಲಾಯರ್ನ ಸಂಸ್ಥಾಪಕ ಬಿ.ಟಿ. ವೆಂಕಟೇಶ ಶನಿವಾರ ಚಾಲನೆ ನೀಡಿದರು.

ರೀಚ್ಲಾಯರ್, ಬಿಸ್ಮಿಲ್ಲಾ ನಗರದ ಎಕ್ಸಲೆಂಟ್ ಇಂಗ್ಲಿಷ್ ಸ್ಕೂಲ್ (ಇಇಎಸ್) ಸಹಯೋಗದಲ್ಲಿ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

‘ಸೋಜ್’ ಎಂಬುದು ರೀಚ್ಲಾಯರ್ ಟ್ರಸ್ಟ್ನ ಒಂದು ಕಾರ್ಯಕ್ರಮವಾಗಿದೆ. ಇದು ವಕೀಲರಲ್ಲಿ ವೃತ್ತಿಪರ ಕೌಶಲಗಳನ್ನು ವೃದ್ಧಿಸುವ ಕೆಲಸ ಮಾಡುವುದರ ಜೊತೆಗೆ ಮಹಿಳೆಯರಿಗಾಗಿ ಇರುವ ಕಾನೂನು, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದಕ್ಕಾಗಿ ವಕೀಲರ ಒಂದು ತಂಡದ ಸಲಹೆ ಸೂಚನೆಗಳನ್ನು ನೀಡುತ್ತದೆ’ ಎಂದು ಆಯೋಜಕರು ತಿಳಿಸಿದ್ದಾರೆ.

ಎಕ್ಸಲೆಂಟ್ ಇಂಗ್ಲಿಷ್ ಶಾಲೆಯ ಸಂಸ್ಥಾಪಕಿ ಬೆನಜೀರ್ ಬೇಗ್, ವಕೀಲ ರಾದ ಅಪರ್ಣಾ, ತುಬಾ ಸಂಬೂರ್, ನಿತಿನ್ ಬಿ., ರವಿ, ಶಂಕರ್, ಎನ್.ಕೆ. ವಿನೋದಾ, ಮುಬಾರಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.