ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ: ₹1.50 ಲಕ್ಷಕ್ಕೆ ಪಾಸ್‌ಪೋರ್ಟ್

ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ಪ್ರಕರಣದ ತನಿಖೆ ಚುರುಕು
Published 27 ಆಗಸ್ಟ್ 2023, 0:23 IST
Last Updated 27 ಆಗಸ್ಟ್ 2023, 0:23 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಪ್ರಮುಖ ಆರೋಪಿ ಜಲಾಲ್‌ನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಓಮನ್‌ ದೇಶಕ್ಕೆ ಹೋಗಿರುವ ಜಲಾನ್, ₹ 1.50 ಲಕ್ಷ ನೀಡಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದನೆಂಬ ಸಂಗತಿ ಪತ್ತೆ ಮಾಡಿದ್ದಾರೆ.

‘ಶ್ರೀಲಂಕಾದ ಜಲಾಲ್ ಅಲಿಯಾಸ್ ಸಿದ್ದಿಕಿ, ಡ್ರಗ್ಸ್ ಪೆಡ್ಲರ್. ಜೊತೆಗೆ, ಅಪರಾಧ ಹಿನ್ನೆಲೆಯುಳ್ಳವ. ಈತನನ್ನು ಎನ್‌ಸಿಬಿ ಅಧಿಕಾರಿಗಳು ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಪರಾರಿಯಾಗಿದ್ದ ಈತ, ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದು ಓಮನ್ ದೇಶಕ್ಕೆ ಹೋಗಿದ್ದಾನೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘5 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಲಂಕಾದ ಪ್ರಜೆಗಳಾದ ಕಾಸನ್‌ ಕುಮಾರ್ ಸಂಕ, ಇ.ಡಬ್ಲ್ಯು.ಎ ಅಮಿಲ್ ನುವಾನ್ ಹಾಗೂ ರಂಗ ಪ್ರಸಾದ್ ಅಕ್ರಮವಾಗಿ ದೇಶದೊಳಗೆ ನುಸುಳಲು ಜಲಾನ್ ವ್ಯವಸ್ಥೆ ಮಾಡಿದ್ದ. ನಗರದ ನಿವಾಸಿಯಾಗಿರುವ ಕೊಲೆ ಆರೋಪಿ ಪರಮೇಶ್ ಅಲಿಯಾಸ್ ಜಾಕ್‌ ಜೊತೆಯಲ್ಲೂ ಜಲಾನ್ ಒಡನಾಟವಿಟ್ಟುಕೊಂಡಿದ್ದ’ ಎಂದು ತಿಳಿಸಿವೆ.

ವಿವೇಕನಗರ ಏಜೆನ್ಸಿಯಿಂದ ಪಾಸ್‌ಪೋರ್ಟ್‌: ‘ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಅನ್ಬಳಗನ್, ಬೆಂಗಳೂರಿನ ವಿವೇಕನಗರದವ. ಪಾಸ್‌ಪೋರ್ಟ್ ಸೇವೆ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ಸಂಪರ್ಕಿಸಿದ್ದ ಜಲಾಲ್, ನಕಲಿ ದಾಖಲೆ ಹಾಗೂ ₹ 1.50 ಲಕ್ಷ ನೀಡಿ ಪಾಸ್‌ಪೋರ್ಟ್ ಮಾಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಜಲಾನ್ ಹಾಗೂ ಇತರೆ ಆರೋಪಿಗಳು, ಹಣ ಅಕ್ರಮ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದರು. ಭಾರತ, ಪಾಕಿಸ್ತಾನ್, ಶ್ರೀಲಂಕಾ ಹಾಗೂ ಇತರೆ ದೇಶಗಳಲ್ಲಿ ಅಪರಾಧ ಎಸಗುತ್ತಿದ್ದರು. ಇದೊಂದು ಅಂತರರಾಷ್ಟ್ರೀಯ ತಂಡವೆಂಬ ಮಾಹಿತಿ ಇದೆ. ಜಲಾನ್‌ನನ್ನು ಕಸ್ಟಡಿಗೆ ಪಡೆಯಲು ಓಮನ್ ಪೊಲೀಸರನ್ನು ಸಂಪರ್ಕಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT