ಬೆಂಗಳೂರು: ಬೆಂಗಳೂರು ಟ್ರೇಡ್ಸ್ ಅಸೋಸಿಯೇಶನ್ (ಬಿಟಿಎ) ಅಧ್ಯಕ್ಷರಾಗಿ ಪ್ರಕೃತಿ ಆ್ಯಡ್ಸ್‌ನ ಶ್ರೀಶ್ ಆರ್. ಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಟಿಎ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.
ರಾಜಸ್ಥಾನ್ ಎಂಪೋರಿಯಂ ಆ್ಯಂಡ್ ಹ್ಯಾಂಡ್‌ಕ್ರಾಫ್ಟ್‌ನ ರಾಜೇಶ್ ಭಂಟಿಯಾ ಕಾರ್ಯದರ್ಶಿಯಾಗಿ, ದೀಪಕ್ ವೆಲ್ಲಿಂಗ್ ಅವರು ಕೋಶಾಧಿಕಾರಿಯಾಗಿ, ದೀಪಂ ಸಿಲ್ಕ್ಸ್‌ನ ವಿಜಯ ಶೇಖರ ರವಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಇನಾಯತ್ ಶಾ, ಓಮರ್ ಅಹಮ್ಮದ್, ಮಹಾವೀರ್ ಜೈನ್, ರಾಮಚಂದ್ರನ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಸ್ಥೆಯ 125ನೇ ವರ್ಷವನ್ನು ಅದ್ದೂರಿಯಾಗಿ ಆಚರಿಸಲು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು, ಸದಸ್ಯತ್ವ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಟಿಎ ಪ್ರಕಟಣೆ ತಿಳಿಸಿದೆ.