ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 20ಕ್ಕೆ ಮುಖಕ್ಕೆ ಧರಿಸುವ 3ಡಿ ಟೆಕ್ನಾಲಜಿಯ ರಕ್ಷಣಾ ಕವಚ

Last Updated 5 ಮೇ 2020, 21:20 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಯಲು ಕೇವಲ ₹20 ವೆಚ್ಚದಲ್ಲಿ ಮುಖಕ್ಕೆ ಧರಿಸುವ ರಕ್ಷಣಾ ಕವಚವನ್ನು (ಫೇಸ್ ಶೀಲ್ಡ್) ಆಂಧ್ರಪ್ರದೇಶದ ಎಸ್‍ಆರ್‌ಎಂ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಸಂಸ್ಥೆ ಅಭಿವೃದ್ಧಿಪಡಿಸಿದೆ.

3ಡಿ ಪ್ರಿಂಟಿಂಗ್ ಟೆಕ್ನಾಲಜಿಯಿಂದ ತಯಾರಾಗಿರುವ ಈ ರಕ್ಷಣಾ ಕವಚವನ್ನು ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಂಚಗುನುಲ ಜಯಪ್ರಕಾಶ್ ವಿನ್ಯಾಸ ಮಾಡಿದ್ದಾರೆ.

‘ಇದನ್ನು ಧರಿಸುವುದರಿಂದ ಕಿವಿ, ಕಣ್ಣು, ಮೂಗು, ಬಾಯಿ ಒಟ್ಟಾರೆ ಮುಖಕ್ಕೆ ಸೋಂಕು ಹರಡದಂತೆ ಹಾಗೂ ಗಾಳಿ, ಧೂಳಿನಿಂದಲೂ ತಡೆಯಬಲ್ಲದು. ಸೋಂಕು ತಡೆಗೆ ಹೋರಾಡುತ್ತಿರುವ ವೈದ್ಯರು, ಪತ್ರಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ಸಾಮಾನ್ಯ ಮಾಸ್ಕ್ ಬದಲಿಗೆ ಈ ಕವಚಗಳನ್ನು ಬಳಸಬಹುದು. ಈ ಉಪಕರಣ ತಯಾರಿಗೆ ಸರ್ಕಾರ ಅನುಮೋದನೆ ನೀಡಿದರೆ, ಕೊರೊನಾದಿಂದ ಪಾರಾಗಲು ಸಾರ್ವಜನಿಕರಿಗೂ ಅನುಕೂಲವಾಗಲಿದೆ’ ಎಂದರು.

ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾರಾಯಣ್ ರಾವ್ ಅವರು ಆಂಧ್ರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದು, ಶೈಕ್ಷಣಿಕ ಸಂಸ್ಥೆಗಳು ಕಾರ್ಯಾರಂಭ ಮಾಡಿದ ಬಳಿಕ ಲಕ್ಷಾಂತರ ವಿದ್ಯಾರ್ಥಿಗಳು ತರಗತಿಗಳಲ್ಲಿ ಈ ಮುಖ ಕವಚ ಧರಿಸಿ ಪಾಠ ಕಲಿಕೆ ಮುಂದುವರಿಸಲು ನೆರವಾಗಲಿದೆ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT