ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 4 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

3 ಲಕ್ಷ ಮಂದಿ ಗುಣಮುಖ * ಆರೂವರೆ ಸಾವಿರ ಮಂದಿ ಸಾವು
Last Updated 7 ಸೆಪ್ಟೆಂಬರ್ 2020, 18:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಕೊರೊನಾ ವೈರಾಣು ಕಾಲಿಟ್ಟು ಸೆ.8ಕ್ಕೆ ಆರು ತಿಂಗಳು ಪೂರ್ಣಗೊಳ್ಳಲಿದ್ದು, ಇಲ್ಲಿಯವರೆಗೆ ಸೋಂಕಿಗೆ ಗುರಿಯಾದವರ 4 ಲಕ್ಷ ದಾಟಿದೆ. ಈ ಪೈಕಿಗುಣಮುಖರಾದವರ ಸಂಖ್ಯೆ 3 ಲಕ್ಷಕ್ಕೆ ಏರಿದೆ.

ಸೋಮವಾರ 5,773 ಮಂದಿ ಸೇರಿ ರಾಜ್ಯದಲ್ಲಿ ಒಟ್ಟು 4,04,324 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಂದೇ ದಿನ 8,015 ಮಂದಿ ಗುಣಮುಖರಾಗುವುದರೊಂದಿಗೆ ಒಟ್ಟು 3,00,770 ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.

11 ದಿನ 1 ಒಂದು ಲಕ್ಷ ಪ್ರಕರಣ

ರಾಜ್ಯದಲ್ಲಿ ಜುಲೈ 27 ರಂದು ಒಂದು ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ 13 ರಂದು ಈ ಸಂಖ್ಯೆ ಎರಡು ಲಕ್ಷ ತಲುಪಿತ್ತು. ಆ ಬಳಿಕ ನಿತ್ಯ ಸರಾಸರಿ 7,500 ಮಂದಿಗೆ ಸೋಂಕು ದೃಢಪಡುತ್ತಿತ್ತು. ಆದರೆ, ಕಳೆದ ಹನ್ನೊಂದೇ ದಿನಗಳಲ್ಲಿ ಒಂದು ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ.ಆಗಸ್ಟ್‌ನಲ್ಲಿ ಒಂದರಿಂದ ಎರಡು ಲಕ್ಷಕ್ಕೇರಲು 17 ದಿನ ಹಿಡಿದಿತ್ತು. ನಂತರದ13 ದಿನಗಳಲ್ಲಿ ಸೋಂಕು ಪ್ರಕರಣಗಳು ಎರಡು ಲಕ್ಷದಿಂದ ಮೂರು ಲಕ್ಷಕ್ಕೆ ಏರಿಕೆಯಾಗಿದ್ದವು.

13 ದಿನಗಳಲ್ಲಿ ಸಾವಿರ ಸಾವು

ಸೆ.7ರಂದು 141 ಜನ ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಈವರೆಗೆ ಒಟ್ಟು 6,534 ಜನ ಕೋವಿಡ್‌ನಿಂದ ಮೃತಪಟ್ಟಂತಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಕಾಲಿಟ್ಟು ನಾಲ್ಕೂವರೆ ತಿಂಗಳಿಗೆ (130 ದಿನಕ್ಕೆ) ಸೋಂಕಿತರ ಸಾವಿನ ಸಂಖ್ಯೆ ಒಂದು ಸಾವಿರ ತಲುಪಿತ್ತು. ಆದರೆ, ಕಳೆದ ಒಂದು ತಿಂಗಳಲ್ಲಿ ( ಜು.27-ಆ.26) 3,213 ಸೋಂಕಿತರ ಸಾವಾಗಿದೆ. ಅಂದರೆ, ನಿತ್ಯ ಸರಾಸರಿ 103 ಸೋಂಕಿತರ ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳ ಪೈಕಿ ಸದ್ಯ 97 ಸಾವಿರ ಜನ ಆಸ್ಪತ್ರೆಗಳಲ್ಲಿ, ಕೋವಿಡ್ ಆರೈಕೆ ಕೇಂದ್ರ ಮತ್ತು ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 794 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 48, ಧಾರವಾಡದಲ್ಲಿ 10, ಕೊಪ್ಪಳದಲ್ಲಿ ತಲಾ 10, ಬೆಳಗಾವಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 8 ಜನ ಸೋಮವಾರ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT