ಮಂಗಳವಾರ, ಫೆಬ್ರವರಿ 18, 2020
27 °C

ಕಾರಿನಲ್ಲಿ ಬಂದು ಮೀನು ಕದ್ದೊಯ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಿಂಗರಾಜಪುರದ ಕುಕ್‌ ಟೌನ್‌ನಲ್ಲಿರುವ ಮೀನು ವ್ಯಾಪಾರಿಗೆ ಮಂಗಳೂರಿನಿಂದ ಬಾಕ್ಸ್‌ನಲ್ಲಿ ಪೂರೈಕೆಯಾದ 110 ಕೆ.ಜಿ ಮೀನನ್ನು ಕಳವು ಮಾಡಲಾಗಿದೆ.

ಈ ಸಂಬಂಧ ಮೀನು ವ್ಯಾಪಾರಿ ದಯಾನಂದ ಎಂಬುವರು ಪುಲಿಕೇಶಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ನನ್ನ ಅಂಗಡಿಗೆ ನಿತ್ಯ ನಸುಕಿನ 4 ಗಂಟೆ ಸುಮಾರಿಗೆ ಮಂಗಳೂರಿನಿಂದ ಮೀನು ಪೂರೈಕೆಯಾಗುತ್ತದೆ. ಫೆ. 11ರಂದು ಕೂಡಾ ಮೀನಿರುವ ಬಾಕ್ಸ್‌ಗಳನ್ನು ಅಂಗಡಿ ಬಳಿ ಇಳಿಸಿ ಮೀನಿನ ಗಾಡಿ ಹೋಗಿದ್ದೆ. ಆದರೆ, 4.20ರ ಸುಮಾರಿಗೆ ಅದೇ ಜಾಗಕ್ಕೆ ಸ್ವಿಫ್ಟ್‌ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ, ಕಾರಿನಿಂದ ಕೆಳಗಿಳಿದು ಬಟ್ಟೆ ಬದಲಿಸಿ ಅಂಗಡಿ ಬಳಿ ಇದ್ದ ಮೀನಿನ ಎರಡು ಬಾಕ್ಸ್‌ಗಳನ್ನು ಕದ್ದುಕೊಂಡು ಹೋಗಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)