ಭಾನುವಾರ, ಜೂಲೈ 12, 2020
29 °C

ಸ್ಟೀಲ್‌ಬ್ರಿಡ್ಜ್‌ ಯೋಜನೆ ಕೈಗೆತ್ತಿಕೊಳ್ಳಲು ಕ್ರಮ: ಡಾ.ಜಿ. ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಸ್ಟೀಲ್‌ಬ್ರಿಡ್ಜ್‌ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೊಮ್ಮೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರಕಾರ ಸ್ಟೀಲ್‌ಬ್ರಿಡ್ಜ್‌ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈ ಯೋಜನೆ ಬಗ್ಗೆ ಸಾಕಷ್ಟು ಪರ ವಿರೋಧ ವ್ಯಕ್ತವಾದ ಕಾರಣ ಕೈಬಿಡಲಾಗಿತ್ತು. 
ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಮತ್ತೊಮ್ಮೆ ಈ ಯೋಜನೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು. 

ಚಾಲುಕ್ಯ ಸರ್ಕಲ್‌ನಿಂದ ಎಸ್ಟೀಮ್‌ಮಾಲ್‌ ವರೆಗೆ ಸ್ಟೀಲ್‌ಬ್ರಿಡ್ಜ್‌ನ ಅವಶ್ಯಕತೆ ಇದೆ. ಆದರೆ ಕೆಲವರು ರಾಜಕೀಯವಾಗಿ ಇದನ್ನು ವಿರೋಧಿಸಿದ್ದರು. ಹೀಗಾಗಿ ಯೋಜನೆ ಅರ್ಧಕ್ಕೆ ನಿಂತಿತ್ತು. ಪ್ರಸ್ತುತ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡಲಾಗುತ್ತದೆ. ಯೋಜನೆಯ ಉದ್ದೇಶ, ಇದರ ವೆಚ್ಚ, ಇದರ ಉಪಯೋಗ ಎಲ್ಲವೂ ಕೂಡ ಜನರಿಗೆ ತಿಳಿಸಿ ಅವರ ಅಭಿಪ್ರಾಯ ಆಹ್ವಾನಿಸುತ್ತೇವೆ. ನಂತರದಲ್ಲಿಯೇ ಯೋಜನೆಯ ಅನುಷ್ಠಾನದ ಅಂತಿಮ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು.

ಚಾಲುಕ್ಯ ಸರ್ಕಲ್‌ನಿಂದ ಏರ್‌ಪೋರ್ಟ್‌ಗೆ ತಲುಪಲು 45 ನಿಮಿಷಕ್ಕೂ ಹೆಚ್ಚು ಕಾಲಾವಕಾಶ ಬೇಕು. ಈ ಸ್ಟೀಲ್‌ಬ್ರಿಡ್ಜ್‌ ಯೋಜನೆಯಿಂದ ಕೇವಲ 20 ನಿಮಿಷದಲ್ಲಿ ತಲುಪಬಹುದು. ಈ ಯೋಜನೆಯಲ್ಲಿ ಏನೇ ನ್ಯೂನತೆ ಇದ್ದರೂ ಅದನ್ನು ಸರಿ ಪಡಿಸಿಕೊಳ್ಳಲು ನಾವು ಸಿದ್ಧ ಎಂದರು. 

ಬಿಜೆಪಿ‌ಯವರು ಕುದುರೆ ವ್ಯಾಪಾರದಲ್ಲಿ ನಿಸ್ಸೀಮರು. ಹಿಂದೊಮ್ಮೆಯೂ ಇದನ್ನು ರುಜುವಾತು ಮಾಡಿದ್ದಾರೆ. ಈ ಬಾರಿಯು ಶುರುವಿನಲ್ಲಿ ಪ್ರಾರಂಭಿಸಿದ್ದರು. ಆದರೆ ಯಶಸ್ಸಾಗಲಿಲ್ಲ. ಈಗ ಮತ್ತೆ ಪ್ರಯತ್ನ ಮಾಡಲು ಹೊರಟಿದ್ದಾರೆ. ಅದೂ ಯಶಸ್ಸು ಕಾಣುವುದಿಲ್ಲ. ಸರಕಾರ ಸ್ಥಿರವಾಗಿರಲಿದೆ, ಆತಂಕ ಪಡುವ ಅಗತ್ಯವಿಲ್ಲ‌ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು