ಶುಕ್ರವಾರ, ಫೆಬ್ರವರಿ 26, 2021
20 °C
ತೆಲಂಗಾಣ ಪೊಲೀಸರ ಕಾರ್ಯಾಚರಣೆ * ನಿರ್ದೇಶಕ ಸೇರಿ ಇಬ್ಬರ ಬಂಧನ

’ನ್ಯಾಷನಲ್ ಸ್ಟಾಕ್ ರಿಸರ್ಚ್‌’ ಕಚೇರಿ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ ಎಚ್‌.ಎನ್‌ ಟಾವರ್ಸ್‌ನಲ್ಲಿರುವ ‘ನ್ಯಾಷನಲ್ ಸ್ಟಾಕ್ ರಿಸರ್ಚ್‌’ ಕಂಪನಿ ಕಚೇರಿ ಮೇಲೆ ತೆಲಂಗಾಣ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕಂಪನಿ ನಿರ್ದೇಶಕ ರಾಹುಲ್‌ಕುಮಾರ್ (27) ಹಾಗೂ ವ್ಯವಸ್ಥಾಪಕ ಬಂಡಲಪಾಳ್ಯ ಅನಂತಸೂರ್ಯ ಚೈತನ್ಯ (26) ಬಂಧಿತರು. ಇನ್‌ಸ್ಪೆಕ್ಟರ್‌ ಕೆ.ವಿ.ವಿಜಯ್‌ಕುಮಾರ್ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ಕಂಪನಿಯಲ್ಲಿದ್ದ ಹಲವು ದಾಖಲೆಗಳನ್ನೂ ಜಪ್ತಿ ಮಾಡಿದೆ.

‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದ ಕಂಪನಿ ಪ್ರತಿನಿಧಿಗಳು, ಹೈದರಾಬಾದ್‌ ನಿವಾಸಿ ಶ್ರವಣ ಚೆಟ್ಟಿರೆಡ್ಡಿ ಎಂಬುವರಿಂದ ₹ 1.81 ಲಕ್ಷ ಪಡೆದು ವಂಚಿಸಿದ್ದರು. ಆ ಸಂಬಂಧ ರಾಜಕೊಂಡ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ಕಂಪನಿ ಮೇಲೆ ದಾಳಿ ಮಾಡಲಾಯಿತು’ ಎಂದು ತೆಲಂಗಾಣದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.