ಶುಕ್ರವಾರ, ಆಗಸ್ಟ್ 23, 2019
21 °C

ವಿದ್ಯಾರ್ಥಿ ಬಸ್‌ ಪಾಸ್: 50 ಸಾವಿರ ಅರ್ಜಿ ತಿರಸ್ಕಾರ

Published:
Updated:

ಬೆಂಗಳೂರು: ರಿಯಾಯಿತಿ ದರದಲ್ಲಿ ಬಸ್‌ ಪಾಸ್ ಪಡೆಯಲು ವಿದ್ಯಾರ್ಥಿಗಳು ಸಲ್ಲಿಸಿದ್ದ 3.36 ಲಕ್ಷ ಅರ್ಜಿಗಳ ಪೈಕಿ 50,827 ಅರ್ಜಿಗಳನ್ನು ಬಿಎಂಟಿಸಿ ತಿರಸ್ಕರಿಸಿದೆ.

ಕ್ರಮ ಬದ್ಧವಾಗಿ ಸಲ್ಲಿಸದ ಕಾರಣಕ್ಕೆ ಅರ್ಜಿಗಳು ತಿರಸ್ಕಾರಗೊಂಡಿದ್ದು, ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸುವಂತೆ ಎಸ್‌.ಎಂ.ಎಸ್ ಮತ್ತು ಇ–ಮೇಲ್ ಮೂಲಕ ಮಾರ್ಗದರ್ಶನ ನೀಡಲಾಗಿದೆ.

‘2.37 ಲಕ್ಷ ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗಿದೆ. 20,804 ಅರ್ಜಿಗಳು ಶಿಕ್ಷಣ ಸಂಸ್ಥೆಗಳಿಂದ ಅನುಮೋದನೆಯಾಗಬೇಕಿದೆ. 27,155 ವಿದ್ಯಾರ್ಥಿಗಳಿಗೆ ಸಮಯ, ದಿನಾಂಕ ಮತ್ತು ಸ್ಥಳ ನಿಗದಿಪಡಿಸಿಕೊಂಡು ಪಾಸ್ ಪಡೆಯಲು ತಿಳಿಸಲಾಗಿದೆ’ ಎಂದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Post Comments (+)