ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು: ಸರ್ವೆಗೆ ಟೆಂಡರ್

Last Updated 26 ಫೆಬ್ರುವರಿ 2020, 19:08 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆ ಬಾಕಿ ಇದ್ದು, ಈ ನಡುವೆ ಯೋಜನೆಗೆ ಬೇಕಿರುವ ಭೂಮಿ ಸರ್ವೆ ನಡೆಸಲು ಸಿದ್ಧತೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.

ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್‌), ಸರ್ವೆ ನಡೆಸಲು ಆಸಕ್ತ ಏಜೆನ್ಸಿಗಳನ್ನು ಆಹ್ವಾನಿಸಿದೆ.

ಯೋಜನೆಗೆ ಅಗತ್ಯ ಇರುವ ಭೂಮಿ ಸರ್ವೆ ಮಾಡಿಕೊಡಲು ₹62.79 ಲಕ್ಷ, ಉದ್ದೇಶಿತ 150 ಕಿ.ಮೀ ರೈಲು ಮಾರ್ಗದಲ್ಲಿ ಈಗಾಗಲೇ ಇರುವ ಮೂಲಸೌಕರ್ಯ (ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ಪೈಪ್‌ಲೈನ್, ವಿದ್ಯುತ್ ಸಂಪರ್ಕದ ಕಂಬ ಅಥವಾ ತಂತಿಗಳು) ಎಷ್ಟಿವೆ ಎಂಬುದನ್ನು ಗುರುತಿಸಲು ₹1.10 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT