ಬೆಂಗಳೂರು: ತುಮಕೂರು ಜಿಲ್ಲೆಯ ತಿಪಟೂರು ಬಳಿಯ ಮಠವೊಂದರ ಸ್ವಾಮೀಜಿಗೆ ಬೆದರಿಕೆ ಹಾಕಿ ₹4.50 ಲಕ್ಷ ಸುಲಿಗೆ ಮಾಡಿದ್ದ ಯುವತಿಯನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಸ್ಫೂರ್ತಿ ಬಂಧಿತ ಯುವತಿ.

ಸ್ವಾಮೀಜಿಯ ದೂರು ಆಧರಿಸಿ ಸ್ಫೂರ್ತಿ ಹಾಗೂ ಆಕೆಯ ಸಹಚರರ ವಿರುದ್ಧ ಬೆದರಿಕೆ ಮತ್ತು ಅಪರಾಧ ಸಂಚು ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

‘ಸ್ಫೂರ್ತಿ ಎಂಬುವವರು ನಾಲ್ಕು ತಿಂಗಳ ಹಿಂದೆ ಕರೆ ಮಾಡಿದ್ದರು. ತಿಪಟೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರಿನಲ್ಲಿ ನೆಲಸಿರುವ ತನಗೆ ಉದ್ಯೋಗವಿಲ್ಲ. ಹೀಗಾಗಿ, ಜೀವನ ನಿರ್ವಹಣೆಗೆ ಕಷ್ಟವಾಗಿದೆ ಎಂದು ಅಲವತ್ತುಕೊಂಡಿದ್ದರು. ಬಳಿಕ, ಹಲವು ಬಾರಿ ಕರೆ ಮಾಡಿ ₹4.50 ಲಕ್ಷ ಕೊಡಬೇಕು. ಇಲ್ಲದಿದ್ದರೆ ಮಠಕ್ಕೆ ಬಂದು ಮರ್ಯಾದೆ ತೆಗೆದು, ಸಮಾಜದಲ್ಲಿ ತಲೆ ಎತ್ತದಂತೆ ಮಾಡುತ್ತೇನೆ. ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹಂತ ಹಂತವಾಗಿ ₹4.50 ಲಕ್ಷ ಸುಲಿಗೆ ಮಾಡಿದ್ದರು’ ಎಂದು ಸ್ವಾಮೀಜಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

₹1 ಕೋಟಿಗೆ ಬೇಡಿಕೆ: ‘ಹಣ ಕೊಟ್ಟ ನಂತರವೂ ಸ್ಫೂರ್ತಿ ತನ್ನ ಸಹಚರರ ಜತೆಗೆ ಸೇರಿಕೊಂಡು ಸಂಚು ರೂಪಿಸಿ, ಕಳೆದೊಂದು ತಿಂಗಳಿಂದ ಪದೇ ಪದೇ ಕರೆ ಮಾಡಿ ₹1 ಕೋಟಿ ಕೊಡುವಂತೆ ಬೆದರಿಸುತ್ತಿದ್ದರು. ಮಾಧ್ಯಮದವರಿಗೆ ತಿಳಿಸಿ, ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಘನತೆಗೆ ಧಕ್ಕೆ ತರುವುದಾಗಿ ಹೆದರಿಸಿದ್ದರು’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

‘ಸ್ಫೂರ್ತಿ ಅವರು ಪದೇ ಪದೇ ಕರೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಸಹಚರರ ಮೂಲಕವೂ ಕರೆ ಮಾಡಿಸಿ ಬೆದರಿಕೆ ಹಾಕಿಸುತ್ತಿದ್ದಾರೆ. ನನ್ನ ಆರೋಗ್ಯ ಹದಗೆಟ್ಟಿದೆ. ಹೀಗಾಗಿ, ಸ್ಫೂರ್ತಿ ಮತ್ತು ಸಹಚರರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನಮಗೆ ರಕ್ಷಣೆ ನೀಡಬೇಕು’ ಎಂದು ದೂರಿನಲ್ಲಿ ಕೋರಿದ್ದರು.

ಸದ್ಯ ಬ್ಲ್ಯಾಕ್ಮೇಲ್ ಪ್ರಕರಣದ ಹಿನ್ನೆಲೆಯಲ್ಲಿ ಸ್ವಾಮೀಜಿ ಕೋರ್ಟ್ ಮೊರೆಹೋಗಿದ್ದು, ತಮಗೆ ಸಂಬಂಧಿಸಿದ ಯಾವುದೇ ಫೋಟೊಗಳು ಹಾಗೂ ವಿಡಿಯೊಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿಂದೆಯೂ ಬಂದಿತ್ತು ಬೆದರಿಕೆ

ಮಹಿಳೆಯೊಬ್ಬರು ಬೆದರಿಕೆ ಹಾಕಿ ₹6 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಇದೇ ಸ್ವಾಮೀಜಿ 2024ರ ಸೆಪ್ಟೆಂಬರ್ನಲ್ಲೂ ಸಿಸಿಬಿ ಠಾಣೆಗೆ ದೂರು ನೀಡಿದ್ದರು. ಆಗ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಠಾಣೆಯ ಪೊಲೀಸರು ಗಗನ್ ಸೂರ್ಯನಾರಾಯಣ್ ವಿದ್ಯಾ ಎಂಬುವವರನ್ನು ಬಂಧಿಸಿದ್ದರು ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.