ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌: ಮೆಟ್ರೊ ಅವಧಿ ವಿಸ್ತರಣೆ

Published 15 ಜನವರಿ 2024, 15:10 IST
Last Updated 15 ಜನವರಿ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜ.17ರಂದು ನಡೆಯಲಿರುವ ಹೊನಲು ಬೆಳಕಿನ ಟಿ20 ಕ್ರಿಕೆಟ್‌ ಪಂದ್ಯ ವೀಕ್ಷಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೊ ರೈಲುಗಳ ಸಂಚಾರ ಅವಧಿಯನ್ನು ಬಿಎಂಆರ್‌ಸಿಎಲ್‌ ವಿಸ್ತರಿಸಿದೆ.

ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ನಾಲ್ಕು ಟರ್ಮಿನಲ್‌ಗಳಿಂದ ಅಂದು ಕೊನೇ ರೈಲು ರಾತ್ರಿ 11.45ಕ್ಕೆ ಹೊರಡಲಿದೆ.

ಕ್ರಿಕೆಟ್‌ ನೋಡಿ ವಾಪಸಾಗುವಾಗ ಟಿಕೆಟ್‌ ಖರೀದಿಸಲು ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಲು ಮೊದಲೇ ಪೇಪರ್‌ ಟಿಕೆಟ್‌ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಜ.17ರ ಮಧ್ಯಾಹ್ನ 2ರಿಂದಲೇ ಪೇಪರ್‌ ಟಿಕೆಟ್‌ ಮಾರಾಟಕ್ಕೆ ಲಭ್ಯವಿದೆ. ಈ ಪೇಪರ್‌ ಟಿಕೆಟ್‌ಗಳು ರಾತ್ರಿ 8ರಿಂದ ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣ ಮತ್ತು ಎಂ.ಜಿ. ರೋಡ್‌ ಮೆಟ್ರೊ ನಿಲ್ದಾಣಗಳಿಂದ ಇತರ ಕಡೆ ಸಂಚಾರಕ್ಕೆ ಬಳಸಬಹುದು.

ಪೇಪರ್‌ ಟಿಕೆಟ್‌ ದರ ₹ 50. ಕ್ಯೂಆರ್‌ ಕೋಡ್‌ ಟಿಕೆಟ್‌ಗಳು ಸಾಮಾನ್ಯ ದರದ ಶೇ 5 ರಿಯಾಯಿತಿಯೊಂದಿಗೆ ಪಂದ್ಯದ ದಿನ ಖರೀದಿಸಿದರೆ ಇಡೀ ದಿನಕ್ಕೆ ಮಾನ್ಯವಾಗಲಿದೆ. ವಾಟ್ಸ್‌ಆ್ಯಪ್‌, ನಮ್ಮ ಮೆಟ್ರೊ ಆ್ಯಪ್‌, ಪೇಟಿಎಂ ಆ್ಯಪ್‌ಗಳಲ್ಲಿ ಕ್ಯೂಆರ್‌ ಟಿಕೆಟ್‌ ಖರೀದಿಸಬಹುದು. ಸ್ಮಾರ್ಟ್‌ಕಾರ್ಡ್‌, ಎನ್‌ಸಿಎಂಸಿ ಕಾರ್ಡ್‌ಗಳನ್ನು ಎಂದಿನಂತೆ ಬಳಸಬಹುದು. 

ವಿಸ್ತೃತ ಸಮಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರೋಡ್‌ ನಿಲ್ದಾಣಗಳಲ್ಲಿ ಕ್ಯೂಆರ್‌ ಟಿಕೆಟ್‌, ಸ್ಮಾರ್ಟ್‌ಕಾರ್ಡ್‌ ಮತ್ತು ಪೇಪರ್ ಟಿಕೆಟ್‌ ಮಾತ್ರ ಬಳಸಲು ಅವಕಾಶ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕರ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT