ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮನ್ನು ವರ್ಗಾವಣೆ ಮಾಡಿ’

Last Updated 9 ಅಕ್ಟೋಬರ್ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಚುನಾವಣೆಯ ನೀತಿಸಂಹಿತೆ ನೆಪ ಮಾಡಿ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಮುಂದೂಡಬಾರದು. ನಿಗದಿತ ದಿನದಂದೇ ಆದ್ಯತಾ ಪಟ್ಟಿ ಪ್ರಕಟಿಸಿ, ಕೌನ್ಸೆಲಿಂಗ್‌ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣಾ ಹೋರಾಟ ಸಮಿತಿ ಒತ್ತಾಯಿಸಿದೆ.

ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಸಮಿತಿಯಲ್ಲಿನ ನೂರಾರು ಶಿಕ್ಷಕರು ನಗರದಲ್ಲಿ ಇರುವ ಶಿಕ್ಷಣ ಆಯುಕ್ತರ ಕಚೇರಿ ಮುಂದೆ ಬುಧವಾರ (ಅ.9) ಬೆಳಿಗ್ಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಆರಂಭವಾಗಿರುವ ಈ ವರ್ಗಾವಣೆ ಪ್ರಕ್ರಿಯೆ ಹಲವು ಕಾರಣಗಳಿಂದ ಮುಂದೂಡುತ್ತಲೇ ಬಂದಿದೆ. ಕಡ್ಡಾಯ, ಹೆಚ್ಚುವರಿ ಶಿಕ್ಷಕರು, ಪರಸ್ಪರ ಮತ್ತು ಕೋರಿಕೆ ವರ್ಗಾವಣೆಯಕೌನ್ಸಿಲಿಂಗ್‌ ದಿನಾಂಕಗಳು ಈಗಾಗಲೇ ನಾಲ್ಕು ಬಾರಿ ಪರಿಷ್ಕರಣೆ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT