ರಾಜರಾಜೇಶ್ವರಿನಗರ: ಸತ್ಯ, ನ್ಯಾಯ, ಪ್ರಾಮಾಣಿಕತೆಯನ್ನು ರಂಗಭೂಮಿ, ಪೌರಾಣಿಕ ನಾಟಕಗಳಿಂದ ಕಲಿಯಬಹುದು ಎಂದು ಶಾಸಕ ಮುನಿರತ್ನ ಅಭಿಪ್ರಾಯಪಟ್ಟರು.

ಹಿರಿಯ ರಂಗಭೂಮಿ ಕಲಾವಿದ, ನಗರಸಭೆ ಮಾಜಿ ಉಪಾಧ್ಯಕ್ಷ ಮುನಿವೆಂಕಟಪ್ಪ–ಪುಟ್ಟಮ್ಮ ಸವಿ ನೆನಪಿಗಾಗಿ ವಿನಾಯಕ ಕೃಪಾ ಘೋಷಿತ ನಾಟಕ ಮಂಡಳಿಯು ಕೆಂಗುಂಟೆಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ದಾನಶೂರ ವೀರಕರ್ಣ’ ಅಥವಾ ‘ವೃಷಕೇತು ಪಟ್ಟಾಭಿಷೇಕ’ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುನಿ ವೆಂಕಟಪ್ಪ ಅವರು 50ಕ್ಕೂ ಹೆಚ್ಚು ಶ್ರೀರಾಮ, ಶ್ರೀಕೃಷ್ಣನ ಪಾತ್ರವನ್ನು ಅಭಿನಯಿಸುವ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದರು. ಜೊತೆಗೆ ಸಮಾಜ ಮುಖಿ ಸೇವೆಯನ್ನು ಮಾಡಿದ್ದರು ಎಂದು ನೆನಪು ಮಾಡಿಕೊಂಡರು.

ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಎಂ. ಮಂಜುನಾಥ್, ಬಿಜೆಪಿ ನಾಯಕ ಕೆ.ಎಸ್. ಯೋಗೇಶ್,
ನಗರ ಮಾಜಿ ಸದಸ್ಯ ಹನುಮೇಗೌಡ. ವಾರ್ಡ್ ಬಿಜೆಪಿ ಅಧ್ಯಕ್ಷ ಶಿವಶಂಕರ್, ಜಿಮ್ ರವಿಗೌಡ, ಎಂ.ಆರ್. ಕುಮಾರ್, ರಾಮಣ್ಣ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.