ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೇಜಸ್ವಿ ಜೀವಲೋಕ’ ಕಾರ್ಯಕ್ರಮ ಇಂದಿನಿಂದ

Last Updated 8 ಸೆಪ್ಟೆಂಬರ್ 2020, 1:55 IST
ಅಕ್ಷರ ಗಾತ್ರ

ಬೆಂಗಳೂರು: ದಿವಂಗತ ಪೂರ್ಣಚಂದ್ರ ತೇಜಸ್ವಿಯವರ 83ನೇ ಜನ್ಮದಿನದ ನಿಮಿತ್ತ ಕರ್ನಾಟಕ ಚಿತ್ರಕಲಾ ಪರಿಷತ್‌ ‘ತೇಜಸ್ವಿ ಜೀವಲೋಕ’ ಕಾರ್ಯಕ್ರಮವನ್ನು ಸೆ.8ರಿಂದ 15ರವರೆಗೆ ಆಯೋಜಿಸಿದೆ.

‘ಮನುಷ್ಯರ ಅಜ್ಞಾನ, ಅಸಡ್ಡೆಗೆ ಒಳಗಾಗಿ ಬದುಕುಳಿಯಲು ಹೆಣಗುತ್ತಿರುವ ಜೀವಿಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲು ಪ್ರತಿವರ್ಷ ‘ತೇಜಸ್ವಿ ಜೀವಲೋಕ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿ ರಣಹದ್ದುಗಳ ಅದ್ಭುತ ಲೋಕ ಅನಾವರಣಗೊಳ್ಳಲಿದೆ’ ಎಂದು ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹದ್ದು ಮತ್ತು ರಣಹದ್ದುಗಳಂತಹ ಜೀವಿಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ನಿಟ್ಟಿನಲ್ಲಿ ‘ಹದ್ದುಗಳ ಅದ್ಭುತ ಲೋಕ’ ಹಾಗೂ ‘ಕೊರೊನಾ ಲೋಕ’ ಕುರಿತ ಕಾರ್ಯಕ್ರಮವನ್ನು ಪರಿಷತ್‌ನ ಆವರಣದಲ್ಲಿ ಆಯೋಜಿಸಲಾಗಿದೆ. ಮಂಗಳವಾರ ಮಧ್ಯಾಹ್ನ 12ಕ್ಕೆ ಉದ್ಘಾಟನೆ ನಡೆಯಲಿದೆ. ಪ್ರತಿ ನಿತ್ಯಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಪ್ರದರ್ಶನ ಇರಲಿದೆ’ ಎಂದರು.

‘ಹದ್ದುಗಳು ಹಾಗೂ ಕೊರೊನಾ ಕುರಿತ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನ, ತಜ್ಞರೊಡನೆ ಸಂವಾದ ನಡೆಯಲಿದೆ. ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ. ದೂರದ ಊರುಗಳಲ್ಲಿರುವವರು ವೆಬಿನಾರ್ ಮೂಲಕ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆಸಕ್ತರು 9448077019 ಸಂಖ್ಯೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT