ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ ನಿರ್ಧಾರ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

ಮೆಟ್ರೊ ಪ್ರಯಾಣ ದರ ಏರಿಕೆ ವಿರೋಧಿಸಿ ತೇಜಸ್ವಿ ಸೂರ್ಯ ಅವರಿಗೆ ಪ್ರತಿಭಟನೆ ಮಾಡದಂತೆ ಪೊಲೀಸರು ಭಾನುವಾರ ನೋಟಿಸ್ ನೀಡಿದ್ದರು. ಆದರೂ ಸೋಮವಾರ ಬೆಳಿಗ್ಗೆ ಆರ್.ವಿ.ರಸ್ತೆ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಹಿಡಿದು ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಟೀಕಿಸಿದರು.

ತೇಜಸ್ವಿ ಅವರನ್ನು ತಡೆಯಲು ಪೊಲೀಸರು ಮುಂದಾದಾಗ, ‘ನಾನು ಪ್ರತಿಭಟನೆ ನಡೆಸುತ್ತಿಲ್ಲ. ಖಾಲಿ ಟ್ರಂಕ್ ಹಿಡಿದು ನಿಂತಿದ್ದೇನೆ. ನನ್ನನ್ನು ಯಾರೂ ತಡೆಯಬಾರದು. ಸಂಸತ್ ಅಧಿವೇಶನ ನಡೆಯುತ್ತಿದೆ. ಕಾನೂನು ತಿಳಿದುಕೊಂಡು ವಶಕ್ಕೆ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕ ರಾಮಮೂರ್ತಿ ಮಾತನಾಡಿ, ಮೆಟ್ರೊ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ಆಗಿದೆ. ದರ ಏರಿಕೆ ನಿರ್ಧಾರ ಕೂಡಲೇ ಕೈ ಬಿಡಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಧ್ವನಿ ಅಡಗಿಸಲು ಸಾಧ್ಯವಿಲ್ಲ: ‘ಕಾಂಗ್ರೆಸ್ ಸರ್ಕಾರದ ‘ಖಾಲಿ ಪೆಟ್ಟಿಗೆ’ ಅಸಲಿಯತ್ತನ್ನು ಮತ್ತು ಸತ್ಯವನ್ನು ಬಯಲಿಗೆಳೆದಿದ್ದಕ್ಕಾಗಿ ನನ್ನನ್ನು ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ’ ಎಂದು ತೇಜಸ್ವಿ ಸೂರ್ಯ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

‘ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮೆಟ್ರೊ ಪ್ರಯಾಣ ದರ, ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರು ಇದರ ಬೆಲೆ ತೆರುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಜೆಟ್ನಲ್ಲಿ ‘ಶ್ವೇತಪತ್ರ’ ಹೊರಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತೇಜಸ್ವಿ ಸೂರ್ಯ ಮತ್ತು ರಾಮಮೂರ್ತಿ ಅವರನ್ನು ವಶಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕರಾಳ ಅಣಕ ವಾಕ್ ಸ್ವಾತಂತ್ರ್ಯದ ದಮನ
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಏರಿಕೆ ಒಪ್ಪಲ್ಲ ಎಂದು ಪತ್ರ ಬರೆಯಿರಿ: ಅಶೋಕ ಸವಾಲು

ಕೇಂದ್ರ ಸರ್ಕಾರವೇ ಮೆಟ್ರೊ ದರ ಏರಿಕೆ ಮಾಡುತ್ತದೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಎರಡು ವರ್ಷ ಪ್ರಯಾಣ ದರ ಏರಿಕೆ ಒಪ್ಪಲು ಸಾಧ್ಯವೇ ಇಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆಯಲಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಸವಾಲು ಹಾಕಿದ್ದಾರೆ. ಮೆಟ್ರೊದಲ್ಲಿ ಶೇ 87 ರಷ್ಟು ಪಾಲು ರಾಜ್ಯ ಸರ್ಕಾರದ್ದೇ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪ್ರಯಾಣ ದರ ಏರಿಕೆ ಮಾಡಿದ್ದು ಮಾತ್ರ ಕೇಂದ್ರ ಸರ್ಕಾರ ಎಂದು ಗೂಬೆ ಕೂರಿಸುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಬಿಎಂಆರ್ಸಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ರಾಜ್ಯ ಸರ್ಕಾರದಿಂದಲೇ ನೇಮಿಸಲಾಗಿದೆ. ಸಾವಿರಾರು ಕೋಟಿ ಟೆಂಡರ್ ಅನ್ನು ರಾಜ್ಯ ಸರ್ಕಾರವೇ ಕರೆಯುತ್ತದೆ. ರಾಜ್ಯ ಆರ್ಥಿಕ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಟೆಂಡರ್ ಅಂತಿಮಗೊಳಿಸುತ್ತಾರೆ. ಇಷ್ಟೆಲ್ಲ ಅಧಿಕಾರ ಹೊಂದಿರುವ ರಾಜ್ಯ ಸರ್ಕಾರ ದರ ಏರಿಕೆಯನ್ನೂ ಇವರೇ ಮಾಡಿದ್ದಾರೆ. ಕೇಂದ್ರ ಸರ್ಕಾರ ಆದೇಶ ಮಾಡುವುದಾದರೆ ದೇಶದ ಇತರ ರಾಜ್ಯಗಳಲ್ಲೂ ಮೆಟ್ರೊ ಪ್ರಯಾಣ ದರ ಏಕೆ ಏರಿಕೆ ಆಗಬೇಕಾಗುತ್ತದೆ. ಅಲ್ಲಿ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.

ದರ ಏರಿಸಿದ್ದು ಕೇಂದ್ರ ಸರ್ಕಾರ: ಸಿದ್ದರಾಮಯ್ಯ

'ನಮ್ಮ ಮೆಟ್ರೊ’ ದರ ಏರಿಕೆ ಮಾಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ನಿಯೋಜಿಸಿದ ‘ಬಿಎಂಆರ್ಸಿಎಲ್’ ಅಧ್ಯಕ್ಷರು ಕೈಗೊಳ್ಳುತ್ತಾರೆ. ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಯಾವುದೇ ಶಿಫಾರಸು ಮಾಡಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಮೆಟ್ರೊ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಸಂಸದ ತೇಜಸ್ವಿ ಸೂರ್ಯ ಮಾಡಿದ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ದರ ಏರಿಕೆ ತಡೆದದ್ದು ರಾಜ್ಯ ಸರ್ಕಾರ’

‘ಈ ಹಂತದಲ್ಲಿ ಮೆಟ್ರೊ ದರ ಏರಿಕೆಯನ್ನು ತಡೆಹಿಡಿಯಿರಿ ಎಂದು ಹೇಳಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ದರ ಹೇರಿಕೆ ತಡೆಹಿಡಿಯಿರಿ ಎಂದು ಸೂಚಿಸಿದ್ದು ನಮ್ಮ ಸರ್ಕಾರ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ದರ ಏರಿಕೆ ತಡೆ ಹಿಡಿಯಿರಿ ಎಂದು ಕೇಂದ್ರ ಸರ್ಕಾರದವರು ಪತ್ರ ಬರೆದಿರಬಹುದು. ಆದರೆ ಈ ರೀತಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವರು ಯಾವ ಕಾನೂನಿನ ಅಡಿ ಪತ್ರ ಬರೆದಿದ್ದಾರೆ? ಕೇಂದ್ರದ ಆದೇಶದಂತೆ ದರ ಪರಿಷ್ಕರಣೆ ಮಾಡಬೇಕು ಎಂದಾದರೆ ಅದಕ್ಕೆ ಹೊಸದಾಗಿ ದರ ನಿಗದಿ ಸಮಿತಿಯನ್ನು ರಚಿಸಬೇಕು. ಯಾರೋ ತಾವು ಪತ್ರ ಬರೆದಿದ್ದಕ್ಕೆ ದರ ಏರಿಕೆಗೆ ತಡೆಬಿತ್ತು ಎಂದರೆ ನಂಬಲಾಗದು’ ಎಂದರು. ‘ದರ ಪರಿಷ್ಕರಣೆಗೆ ದೆಹಲಿ ಮೆಟ್ರೊ ಮಾದರಿ ಅನುಸರಿಸುತ್ತಾರೆ. ಸೋಮವಾರ ನಡೆಯಬೇಕಿದ್ದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಸಭೆ ಮುಂದಕ್ಕೆ ಹೋಗಿದೆ. ಕೇಂದ್ರಕ್ಕೆ ಅಧಿಕಾರ ಇದ್ದಿದ್ದರೆ ಇವತ್ತೇ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.