ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಪ್ರಸಾರಗೊಂಡಲ್ಲಿ ಸಂಸ್ಕೃತಿ ಸುಭದ್ರ: ಥಾವರಚಂದ್ ಗೆಹಲೋತ್

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಮತ
Last Updated 9 ಸೆಪ್ಟೆಂಬರ್ 2021, 13:10 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಸಂಸ್ಕೃತಿ ಹಾಗೂ ಪುರಾತನ ಭಾಷೆಯಾದ ಸಂಸ್ಕೃತ ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ. ದೇಶದ ಸಂಸ್ಕೃತಿ ಸುಭದ್ರಗೊಳ್ಳಬೇಕಾದರೆ ಸಂಸ್ಕೃತದ ಪ್ರಚಾರ ನಡೆಯಬೇಕು’ ಎಂದುರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಹಮ್ಮಿಕೊಂಡ ಸಮಾರಂಭದಲ್ಲಿ ‘ಸಂಸ್ಕೃತ ಮಹೋತ್ಸವ’ವನ್ನು ಉದ್ಘಾಟಿಸಿದ ಅವರು, ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 15 ಮಂದಿಗೆ ‘ಸಂಸ್ಕೃತ ಗ್ರಂಥ ಪುರಸ್ಕಾರ’ ಪ್ರದಾನ ಮಾಡಿದರು.

‘ಸಂಸ್ಕೃತವು ವಿಶ್ವದ ಹಲವು ಭಾಷೆಗಳ ತಾಯಿ. ಹೇರಳ ಭಾಷಾ ಸಂಪನ್ಮೂಲವನ್ನು ಹೊಂದಿರುವ ಸಂಸ್ಕೃತವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಮನೋಭಾವ ತೊಲಗಬೇಕು. ಭಾಷೆಯು ಸರ್ವವ್ಯಾಪಿ, ಸರ್ವಸ್ಪರ್ಶಿಯಾದಲ್ಲಿ ದೇಶದ ಸಂಸ್ಕೃತಿಯೂ ಶ್ರೀಮಂತಗೊಳ್ಳುತ್ತದೆ. ಹಾಗಾಗಿ, ಈ ಭಾಷೆಯ ಪ್ರಸಾರಕ್ಕೆ ವಿದ್ವಾಂಸರು ಹಾಗೂ ವಿಶ್ವವಿದ್ಯಾಲಯ ಶ್ರಮಿಸಬೇಕು’ ಎಂದರು.

‘ಸಂಸ್ಕೃತವು ಪರಿಪೂರ್ಣ ವ್ಯಾಕರಣವನ್ನು ಹೊಂದಿದೆ. ಕಂಪ್ಯೂಟರ್‌ ಭಾಷೆಗಳನ್ನು ಅಭಿವೃದ್ಧಿಪಡಿಸುವಲ್ಲಿಯೂ ಈ ಭಾಷೆ ನೆರವಾಗಿದೆ. ‘ವಸುದೈವ ಕುಟುಂಬಕಂ’ ಪರಿಕಲ್ಪನೆಯ ಹಿಂದೆಯೂ ಈ ಭಾಷೆಯ ಪ್ರಭಾವವಿದೆ. ಈ ಭಾಷೆ ಹಾಗೂ ಸಂಸ್ಕೃತಿಯ ಪ್ರಸಾರಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ. ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಲಿವೆ’ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ‘ಸರ್ವರ ಕಲ್ಯಾಣ ಸಂಸ್ಕೃತದ ಆಶಯ. ಕನ್ನಡದ ವೈಜ್ಞಾನಿಕ ಹಾಗೂ ವೈಚಾರಿಕ ಸಾಹಿತ್ಯಕ್ಕೆ ಸಂಸ್ಕೃತದ ಕೊಡುಗೆ ಮಹತ್ವದ್ದು. ಸಂಸ್ಕೃತ ವಿಶ್ವವಿದ್ಯಾಲಯವು ಬೋಧನೆಯ ಜೊತೆಗೆ ಸಂಶೋಧನೆಯನ್ನೂ ಕೈಗೊಳ್ಳಬೇಕು’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿಪ್ರೊ.ಕೆ.ಇ. ದೇವನಾಥನ್, ‘ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶನದಂತೆ ವಿಶ್ವವಿದ್ಯಾಲಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT