ಮಂಗಳವಾರ, ಸೆಪ್ಟೆಂಬರ್ 28, 2021
22 °C

‘ಕಾವೇರಿ ಕೂಗು’ ಪ್ರಶ್ನಿಸಿದ್ದ ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾವೇರಿ ನದಿ ತೀರದಲ್ಲಿ ಸಸಿಗಳನ್ನು ನೆಡುವ ‘ಕಾವೇರಿ ಕೂಗು’ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

‘ಬಂಜರು ಭೂಮಿಯಲ್ಲಿ ಸಸಿಗಳನ್ನು
ನೆಡುವುದು ಅಪರಾಧವಲ್ಲ. ಸರ್ಕಾರದ ಜಾಗದಲ್ಲಿ ಸಸಿ ನಡೆವುದನ್ನು ನಿರ್ಬಂಧಿ
ಸಲು ಯಾವುದೇ ಶಾಸನಬದ್ಧ ನಿಬಂಧನೆಗಳಿಲ್ಲ’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

‘ಸಸಿ ನೆಡಲು ಸದ್ಗುರು ಜಗ್ಗಿ ವಾಸುದೇವ ನೇತೃತ್ವದ ಈಶಾ ಔಟ್‌ರೀಚ್
ಸಂಸ್ಥೆ ಸಾರ್ವಜನಿಕರಿಂದ ಹಣ ಸಂಗ್ರಹಿಸು
ತ್ತಿದೆ. ಸರ್ಕಾರಿ ಭೂಮಿಯಲ್ಲಿ ಸಸಿ ನೆಡಲು
ಯಾವುದೇ ಅನುಮತಿ ಪಡೆದು
ಕೊಂಡಿಲ್ಲ’ ಎಂದು 2019ರಲ್ಲಿ ಸಾರ್ವಜ
ನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಅದನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡಿತ್ತು. ‘ಇದು ಸರ್ಕಾರಿ ಯೋಜನೆಯಲ್ಲ ಮತ್ತು ಸರ್ಕಾರದ ಜಾಗದಲ್ಲಿ ಸಸಿಗಳನ್ನು ನೆಡುತ್ತಿಲ್ಲ’ ಎಂದು ಸರ್ಕಾರ ನೀಡಿದ್ದ ಹೇಳಿಕೆ ಗಮನಿಸಿದ ಪೀಠ, ‘ಒಂದು ವೇಳೆ ಸರ್ಕಾರಿ ಜಾಗದಲ್ಲೇ ಮರಗಳನ್ನು ಬೆಳಸಿದ್ದರೂ ಅದನ್ನು ನಿಷೇಧಿಸುವುದು ವಿನಾಶಕ್ಕೆ ಹಾದಿ ಮಾಡಿಕೊಟ್ಟಂತೆ’ ಎಂದು ಅಭಿಪ್ರಾಯಪಟ್ಟಿತು.

ಸುಪ್ರೀಂ ಕೋರ್ಟ್‌ನ ತೀರ್ಪು ಉಲ್ಲೇಖಿಸಿದ ಪೀಠ, ‘ಮಾನವಕುಲ ಮತ್ತು ಭೂಮಿ ಉಳಿಸಲು ಇರುವ ಏಕೈಕ ಮಾರ್ಗವೆಂದರೆ ಅರಣ್ಯೀಕರಣ. ಇದನ್ನು ಈಶಾ ಔಟ್‌ರಿಚ್‌ ಮಾಡುತ್ತಿದೆ. ಅದನ್ನು ಮೆಚ್ಚಬೇಕು’ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು