ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ₹10 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

Published : 27 ಮಾರ್ಚ್ 2024, 16:00 IST
Last Updated : 27 ಮಾರ್ಚ್ 2024, 16:00 IST
ಫಾಲೋ ಮಾಡಿ
Comments

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆಡಳಿತಾತ್ಮಕ ಸಮಿತಿಯ ತನಿಖಾ ವರದಿಯನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ಆಂಗ್ಲ ದಿನಪತ್ರಿಕೆಗೆ ಹೈಕೋರ್ಟ್‌ ₹ 10 ಲಕ್ಷ ದಂಡ ವಿಧಿಸಿದೆ. ಹೈಕೋರ್ಟ್‌ ಆಡಳಿತಾತ್ಮಕ ಸಮಿತಿಯ ವರದಿ ಪತ್ರಿಕೆಗೆ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ವಿಚಾರಣೆ ನಡೆಸುವಂತೆಯೂ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ಜಿಲ್ಲಾ ನ್ಯಾಯಾಧೀಶರು (ಈಗ ನಿವೃತ್ತರು) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎನ್‌.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪತ್ರಿಕೆಯ ಮಾಲೀಕರು ದಂಡದ ಮೊತ್ತವನ್ನು ಎರಡು ತಿಂಗಳ ಒಳಗಾಗಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು’ ಎಂದು ಆದೇಶಿಸಿದೆ.

‘ನ್ಯಾಯಾಂಗ ಅಧಿಕಾರಿಗೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣದ ಕುರಿತು ‍ಪತ್ರಿಕೆ ಅರೆಬೆಂದ ಅಂಶಗಳನ್ನು ಒಳಗೊಂಡ ವರದಿಯನ್ನು ಪ್ರಕಟಿಸಬಾರದಿತ್ತು. ಪತ್ರಿಕೆ ವೃತ್ತಿಪರವಾಗಿ ನಡೆದುಕೊಳ್ಳದೇ ಇರುವುದರಿಂದ ಅರ್ಜಿದಾರರಿಗೆ ಅಪಾರ ನಷ್ಟವಾಗಿದೆ. ನ್ಯಾಯಾಂಗ ಅಧಿಕಾರಿಯ ನಡತೆಯನ್ನು ನಿರ್ಧರಿಸುವ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಗೆ ವರದಿಯಿಂದ ಹಿನ್ನಡೆಯಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಪತ್ರಿಕೆ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಪತ್ರಿಕೆಯ ವರದಿಗಾರ ಮತ್ತು ಸಂಪಾದಕರ ನಡೆ ಒಪ್ಪಿತ ರೀತಿಯಲ್ಲಿ ಇಲ್ಲ. ಆಕ್ಷೇಪಾರ್ಹ ವರದಿ ಪ್ರಕಟಿಸುವುದಕ್ಕೂ ಆರು ತಿಂಗಳ ಮೊದಲೇ ಹೈಕೋರ್ಟ್‌ ವರದಿಯನ್ನು ಒಪ್ಪದೇ ಇರಲು ನಿರ್ಧರಿಸಿತ್ತು. ಆದರೆ, ಪತ್ರಿಕೆ ತನ್ನ ವರದಿಯಲ್ಲಿ ಈ ಮಹತ್ವದ ಅಂಶವನ್ನು ಉಲ್ಲೇಖ ಮಾಡಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT