ಸೋಮವಾರ, ಆಗಸ್ಟ್ 8, 2022
23 °C

ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜೀವನ್‌ ಬಿಮಾ ನಗರದ ಎಲ್‌ಐಸಿ ಕಾಲೊನಿಯಲ್ಲಿ ಮನೆ ಕೆಲಸಕ್ಕಿದ್ದ ದಂಪತಿಯೇ ವೃದ್ಧೆಯ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ಧಾರೆ.

ಕೇಂದ್ರೀಯ ವಿದ್ಯಾಲಯ ರಸ್ತೆಯ ನಿವಾಸಿ ಗಿರಿಯಪ್ಪ ಅವರ ಮನೆಯಲ್ಲಿದ್ದ ₹ 10 ಲಕ್ಷ, 100 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಕೆಲಸಕ್ಕಿದ್ದ ಸಂಗೀತಾ ಮತ್ತು ಆಕೆಯ ಪತಿ ಪ್ರತಾಪ್ ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.

ಗಿರಿಯಪ್ಪ ಅವರ ಮಗ ವಿನೋದ್ ಮತ್ತು ಸೊಸೆ ಹೊರಗೆ ಹೋಗಿದ್ದರು. ಆಗ ಗಿರಿಯಪ್ಪರ ಪತ್ನಿ 60 ವರ್ಷದ ಮಂಜುಳಾ ಮಾತ್ರ ಮನೆಯಲ್ಲಿದ್ದಾಗ ಹೊರಗಿನಿಂದ ಇಬ್ಬರನ್ನು ಕರೆಸಿಕೊಂಡು, ಹಣ ಹಾಗೂ ಚಿನ್ನಾಭರಣ ದೋಚಲಾಗಿದೆ.

ನೇಪಾಳ ಮೂಲದ ಸಂಗೀತಾ ಹಾಗೂ ಪ್ರತಾಪ್‌ ಅವರು ಗಿರಿಯಪ್ಪ ಅವರ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮನೆಯ ವ್ಯವಹಾರಗಳ ಬಗ್ಗೆ ದಂಪತಿಗೆ ಮಾಹಿತಿ ಇತ್ತು. ಆರೋಪಿಗಳ ಸುಳಿವು ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೀವನ್‍ ಬಿಮಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.