ಬೆಂಗಳೂರು:ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ತರಲು ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ವೈದ್ಯಕೀಯ ಕಾಲೇಜುಗಳ ಆರ್ಥಿಕ ಸ್ವಾವಲಂಬನೆ ಕುರಿತು ನೀತಿ ಆಯೋಗ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

‘ನೀತಿ ಆಯೋಗವೇ ಈ ಪ್ರಸ್ತಾವನೆ ಮುಂದಿಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವವೈದ್ಯರು, ಹಾಸಿಗೆ, ಸಂಪನ್ಮೂಲ, ಗುಣಮಟ್ಟದ ಕೊರತೆ ನೀಗಿಸಲು ಖಾಸಗಿ ಪಾಲುದಾರಿಕೆ ಹೆಚ್ಚಾಗಬೇಕು. ಸರ್ಕಾರ ಈಗ 19 ವೈದ್ಯಕೀಯಕಾಲೇಜುಗಳನ್ನು ನಡೆಸುತ್ತಿದೆ. 4 ಕಾಲೇಜುಗಳ ಸ್ಥಾಪನೆಗೆ ಸಿದ್ಧತೆ ನಡೆದಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೂ ಕೆಲಸ ಮಾಡುತ್ತಿದೆ. ನೀತಿ ಆಯೋಗದ ಷರತ್ತು ಪಾಲಿಸುವ ಖಾಸಗಿ ಸಂಸ್ಥೆಗಳು ಈ ಯೋಜನೆಯ ಭಾಗವಾಗಬಹುದು. ಆದರೆ, ಹಣ ಹಂಚಿಕೆ, ಅನುಪಾತದ ಬಗ್ಗೆ ನಿರ್ಧಾರವಾಗಿಲ್ಲ’ ಎಂದರು.

‘ಸರ್ಕಾರಿಆಸ್ಪತ್ರೆಯಲ್ಲಿ ಖಾಸಗಿಯವರು ಹೂಡಿಕೆ ಮಾಡಿದರೆ ಆಸ್ಪತ್ರೆ ನಿರ್ವಹಣೆ ವೆಚ್ಚ ಕಡಿಮೆ ಆಗುತ್ತದೆ, ವೈದ್ಯರ ಸಂಖ್ಯೆ, ಗುಣಮಟ್ಟ ಹೆಚ್ಚಿಸಬಹುದು. ಸಾಮಾನ್ಯವಾಗಿ ಇಂಥ ಆಸ್ಪತ್ರೆಗಳಲ್ಲಿ 150- 200 ಹಾಸಿಗೆಗಳಿರುತ್ತವೆ, ಈ ಸಂಖ್ಯೆಯನ್ನು 500 ರಿಂದ 700ರವರೆಗೂ ಹೆಚ್ಚಿಸಿದರೆ ಗುಣಮಟ್ಟದ ಕೊರತೆ ಉಂಟಾಗಬಹುದು. ಇಂತಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಿಂದ ಪರಿಸ್ಥಿತಿ ಸುಧಾರಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.