ಬೆಂಗಳೂರು: ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ನೀರಿನ ಸಂಪ್ ಸ್ವಚ್ಛಗೊಳಿಸುವ ವೇಳೆ ಉಸಿರಾಟ ಸಮಸ್ಯೆಯಿಂದ ಮೂವರು ಮೃತಪಟ್ಟಿದ್ದಾರೆ.

ಮನೆ ಮಾಲೀಕ ಮುನಿಶಾಮಪ್ಪ (67), ಪ್ಲಂಬರ್ ರುದ್ರಕುಮಾರ್ (40), ಡೆಲಿವರಿ ಬಾಯ್ ವಿಶ್ವನಾಥ್ ಆಚಾರ್ (40) ಮೃತರು.

ಠಾಣಾ ವ್ಯಾಪ್ತಿಯ ಇಮ್ಮಡಿ ಹಳ್ಳಿ ದೇವಸ್ಥಾನ ವೃತ್ತದ ಬಳಿ ವಾಸವಾಗಿದ್ದ ಮುನಿಶಾಮಪ್ಪ, ಶನಿವಾರ ತಮ್ಮ ಮನೆಯ ನೀರಿನ ಸಂಪ್ ಅನ್ನು ರಾಸಾಯನಿಕದಿಂದ ಸ್ವಚ್ಛಗೊಳಿಸುತ್ತಿದ್ದರು. ಆಗ ಉಸಿರಾಟ ಸಮಸ್ಯೆಯಿಂದ ಮೂರ್ಛೆ ಹೋದರು. ಇವರ ರಕ್ಷಣೆಗೆ ಬಂದ ರುದ್ರಕುಮಾರ್ ಸಹ ಉಸಿರಾಟ ಸಮಸ್ಯೆಯಿಂದ ಪ್ರಜ್ಞೆ ತಪ್ಪಿದರು.

ಸಂಪ್ಗೆ ಇಳಿದಿದ್ದ ಇಬ್ಬರೂ ಹೊರಗೆ ಬಾರಲಿಲ್ಲ. ಆತಂಕಗೊಂಡು ಇವರನ್ನು ನೋಡಲು ಬಂದ ವಿಶ್ವನಾಥ್ ಸಹ ಮೂರ್ಛೆ ಹೋದರು. ಸ್ಥಳೀಯರು ತಕ್ಷಣ 112ಗೆ ಕರೆ ಮಾಡಿ ವಿಷಯ ತಿಳಿಸಿದರು. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿ
ದ್ದಾರೆ ಎಂದು ಪೊಲೀಸರು ಹೇಳಿದರು.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ರವಾನಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.