ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬವಾರಿಯಾ’ ಗ್ಯಾಂಗ್‌ನ ಮೂವರು ಸೆರೆ

Last Updated 9 ಸೆಪ್ಟೆಂಬರ್ 2021, 7:27 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ಮತ್ತು ರೈಲಿನ ಮೂಲಕ ನಗರಕ್ಕೆ ಬಂದು ಯಾರೂ ಇಲ್ಲದ ಸಮಯದಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಬವಾರಿಯಾ ಗ್ಯಾಂಗ್‌ನ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹6.5 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ರಾಜಸ್ಥಾನದ ಮುಕೇಶ್‌, ಲಕ್ಷ್ಮಣ್‌ ಹಾಗೂ ಧರ್ಮ ಬಂಧಿತರು.

‘ಆರೋಪಿಗಳು ತಮ್ಮ ಗುಂಪಿನ ಇತರ ಸದಸ್ಯರ ಜೊತೆಗೆ ಆಗಸ್ಟ್‌ 10ರಂದು ಅಮೃತನಗರ ನಿವಾಸಿ ಪ್ರಿಯದ
ರ್ಶಿನಿ ಎಂಬುವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರು. ಶಿಕ್ಷಕಿಯಾಗಿರುವ ಅವರು ಬೆಳಿಗ್ಗೆ 11.20ರ ಸುಮಾರಿಗೆ ‌ಶಾಲೆಗೆ ಹೋಗಿದ್ದರು. ಈ ವೇಳೆ ಮನೆಯ ಬಾಗಿಲು ಒಡೆದು ಒಳಗೆ ನುಗ್ಗಿದ್ದ ಆರೋಪಿಗಳು 212 ಗ್ರಾಂ ಚಿನ್ನಾಭ
ರಣ ಹಾಗೂ ₹1.7 ಲಕ್ಷ ನಗದು ಕದ್ದು ರಾಜಸ್ಥಾನಕ್ಕೆ ಮರಳಿದ್ದರು. ಈ ಸಂಬಂ
ಧ ಪ್ರಿಯದರ್ಶಿನಿ ಅವರು ಠಾಣೆಗೆ ದೂರು ನೀಡಿದ್ದರು’ ಎಂದಿದ್ದಾರೆ.

‘ಇದು ಬವಾರಿಯಾ ಗ್ಯಾಂಗ್‌ನ ಕೃತ್ಯ ಎಂಬುದುಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ತಿಳಿದುಬಂದಿತ್ತು. ಹೀಗಾಗಿ ನಮ್ಮ ತಂಡವು ರಾಜಸ್ಥಾನಕ್ಕೆ ತೆರಳಿತ್ತು. ಅಲ್ಲಿ ಒಂದು ವಾರ ಇದ್ದು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು, ಕದ್ದ ಚಿನ್ನಾಭರಣಗಳನ್ನು ಮಾರಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT