ಶನಿವಾರ, ಜೂನ್ 19, 2021
22 °C

ಟಿಪ್ಪರ್‌ ಡಿಕ್ಕಿ: ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮರಳು ತುಂಬಿದ್ದ ಟಿಪ್ಪರ್‌ ಡಿಕ್ಕಿ ಹೊಡೆದು ಮನೆಯ ಗೋಡೆ ಕುಸಿದು ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಹೆಬ್ಬಾಳ ಸಮೀಪದ ಭುವನೇಶ್ವರಿ ನಗರದಲ್ಲಿ ಮಂಗಳವಾರ ನಡೆದಿದೆ. ತಮಿಳುನಾಡು ನಿವಾಸಿ, ಕೂಲಿ ಕಾರ್ಮಿಕ ಅಯ್ಯನಾರ್– ರೀನಾ ದಂಪತಿ ಪುತ್ರಿ ಮೋನಿಶಾ ಮೃತಳು.

ಬೆಳಿಗ್ಗೆ 11.30ರ ಸುಮಾರಿಗೆ ಮನೆ ಸಮೀಪ ಖಾಲಿ ನಿವೇಶನದಲ್ಲಿ ಮರಳು ಆನ್ ಲೋಡ್ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಗೋಡೆ ಕುಸಿದಿದೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ತಿಳಿಸಿದರು.

ಅಯ್ಯನಾರ್‌, ಪತ್ನಿ ಮತ್ತು ಪುತ್ರಿ ಜತೆ ಭುವನೇಶ್ವರಿ ನಗರದಲ್ಲಿ ನೆಲೆಸಿದ್ದಾರೆ. ಅವರ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಹನುಮಂತ ರೆಡ್ಡಿ ಎಂಬವರು ಮರಳು ಮತ್ತು ಜಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ ಮರಳು ತುಂಬಿದ್ದ ಲಾರಿ ಅಲ್ಲಿಗೆ ಬಂದಿದ್ದು,  ನಿವೇಶನದ ಒಳಗೆ ಹಿಮ್ಮುಖವಾಗಿ ಪ್ರವೇಶಿಸಿ ಮರಳು ಸುರಿಯಲು ಯತ್ನಿಸುವ ವೇಳೆ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ, ಪಕ್ಕದ ಮನೆಗೆ ನುಗ್ಗಿದೆ. ಇದರಿಂದ ಗೋಡೆ ಕುಸಿದಿದೆ ಎಂದು ಪೊಲೀಸರು ಹೇಳಿದರು.

‌ಹೆಬ್ಬಾಳ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಮರಳು ವ್ಯಾಪಾರಿ ಹನುಮಂತ ರೆಡ್ಡಿ, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

₹ 50 ಸಾವಿರ ನೆರವು : ಘಟನೆ ನಡೆದ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ತೆರಳಿದ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್‌, ಮೃತಳ ಕುಟುಂಬಕ್ಕೆ ವೈಯಕ್ತಿಕವಾಗಿ ₹ 50 ಸಾವಿರ ನೆರವು ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು