ಬೆಂಗಳೂರು: ‘ಇಂದಿನ ಸಂಶೋಧನೆಗಳು ಭವಿಷ್ಯದ ಅಭಿವೃದ್ಧಿಗೆ ಬುನಾದಿಯಾಗಲಿವೆ. ಸಂಶೋಧಕರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಆದ್ಯತೆ ನೀಡಬೇಕು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಹೇಳಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಮಂಗಳವಾರ ನಡೆದ ‘ಸ್ನಾತಕೋತ್ತರ ವಿಜ್ಞಾನ ಸಪ್ತಾಹ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಶೋಧನೆಯ ಮೂಲಭೂತ ಹಾಗೂ ಅನ್ವಯಿಕ ಆಯಾಮಗಳೆರಡನ್ನೂ ಪರಿಚಯಿಸುವುದರ ಜೊತೆಗೆ ಪರಿಣಾಮಕಾರಿ ಸಂವಹ ಪ್ರಾವೀಣ್ಯತೆಯನ್ನು ಸಾಧಿಸಲು ವಿಜ್ಞಾನ ಸಪ್ತಾಹಗಳು ನೆರವಾಗುತ್ತವೆ. ಕೃಷಿಯು ವೈಜ್ಞಾನಿಕ ಜ್ಞಾನವನ್ನು ಸಂಯೋಜಿಸಿ ವರ್ಗಾಯಿಸುವಲ್ಲಿ ಸಹಾಯವಾಗುತ್ತದೆ’ ಎಂದರು.