ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮಾಸಿಕ ಜನಸಂಪರ್ಕ ಸಭೆ

Last Updated 26 ನವೆಂಬರ್ 2020, 20:32 IST
ಅಕ್ಷರ ಗಾತ್ರ

ಬೆಂಗಳೂರು: ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ತರುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಠಾಣೆಗಳಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು 'ಮಾಸಿಕ ಜನಸಂಪರ್ಕ ಸಭೆ' ನಡೆಯಲಿದೆ.

ಇದೇ 28ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಠಾಣೆಗಳ ಇನ್‍ಸ್ಪೆಕ್ಟರ್ ಗಳನ್ನು ಭೇಟಿ ಮಾಡಿ, ಸಾರ್ವಜನಿಕರು ತಮ್ಮ ದೂರು, ಅಹವಾಲುಗಳನ್ನು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಠಾಣೆಗಳಲ್ಲಿ ನೀಡಲಾದ ದೂರಿನ ಸ್ಥಿತಿಗತಿ, ಬಾಕಿ ಉಳಿದಿರಲು ಸಕಾರಣ, ಸ್ಪಷ್ಟೀಕರಣ, ಪಾಸ್‍ಪೋರ್ಟ್, ಪೂರ್ವಾಪರ ವಿಚಾರಣೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.

ಪುಲಕೇಶಿ ನಗರ, ಮಲ್ಲೇಶ್ವರ, ಬಾಣಸವಾಡಿ, ಹನುಮಂತ ನಗರ, ಸದಾಶಿವ ನಗರ, ಅಶೋಕ ನಗರ, ವಿಜಯ ನಗರ, ಆರ್.ಟಿ.ನಗರ, ಕೋರಮಂಗಲ, ಯಲಹಂಕ ಹಾಗೂ ಕೆ.ಆರ್.ಪುರ ಠಾಣೆಗಳಲ್ಲಿ ಈ ಶನಿವಾರ 'ಮಾಸಿಕ ಜನಸಂಪರ್ಕ ಸಭೆ' ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT