ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಪ್ರವಾಸದ ಹೆಸರಿನಲ್ಲಿ ₹ 43.60 ಲಕ್ಷ ವಂಚನೆ

Last Updated 20 ಜೂನ್ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶ ಪ್ರವಾಸದ ಹೆಸರಿನಲ್ಲಿ ಕಂಪನಿಯೊಂದು ಸಾರ್ವಜನಿಕರಿಂದ ₹43.60 ಲಕ್ಷ ಪಡೆದುಕೊಂಡು ವಂಚಿಸಿದ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಓಂ ಟೂರ್ಸ್ ಆ್ಯಂಡ್ ಲೀಜರ್‌ ಹಾಲಿಡೇಸ್’ ಸಂಸ್ಥೆಯ ಎ. ಆನಂದ್ ಎಂಬುವರು ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳಾದ ಅರುಣ್ ಪ್ರಕಾಶ್, ಗೀತಾಂಜಲಿ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿವಿಧ ದೇಶಗಳ ಪ್ರವಾಸಕ್ಕೆಂದು ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಆರೋಪಿಗಳು ಇರುವ ಮನ್ವಿತಾ ಹಾಲಿಡೇ ಕ್ಲಬ್‌ ಕಂಪನಿಗೆ ಕೊಟ್ಟಿದ್ದೆ. ಆದರೆ, ಕಂಪನಿಯವರು ಯಾವುದೇ ಕಾರಣ ನೀಡದೇ ಪ್ರವಾಸ ರದ್ದುಪಡಿಸಿದ್ದಾರೆ. ಮುಂಗಡವಾಗಿ ನೀಡಿದ್ದ ಹಣವನ್ನೂ ವಾಪಸು ನೀಡಿಲ್ಲ’ ಎಂದು ದೂರುದಾರ ಆನಂದ್ ಆರೋಪಿಸಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT