ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆಗೆ BMTC ಸಿಬ್ಬಂದಿಗೆ ತರಬೇತಿ

Published 4 ಡಿಸೆಂಬರ್ 2023, 15:58 IST
Last Updated 4 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ಪೊಲೀಸ್‌ ಟ್ರಾಫಿಕ್‌ ಕಮಾಂಡ್‌ ಸೆಂಟರ್‌ ಸಂಚಾರ ನಿಯಮ ಪಾಲನೆ ತರಬೇತಿಯನ್ನು ಸೋಮವಾರ ಆರಂಭಿಸಲಾಯಿತು.

ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಮಾತನಾಡಿ, ‘ಸಂಸ್ಥೆಯಲ್ಲಿ ಒಟ್ಟು 30 ಸಾವಿರ ಸಿಬ್ಬಂದಿ ಇದ್ದಾರೆ. ಅದರಲ್ಲಿ 25 ಸಾವಿರ ಚಾಲನಾ ಸಿಬ್ಬಂದಿಯೇ ಆಗಿದ್ದಾರೆ. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಮುಖ್ಯ ಸಂಚಾರ ವ್ಯವಸ್ಥಾಪಕ (ಆಚರಣೆ) ಜಿ.ಟಿ.ಪ್ರಭಾಕರ ರೆಡ್ಡಿ ಮಾತನಾಡಿ, ‘ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಸಂಸ್ಥೆ ಕೋಟ್ಯಂತರ ರೂಪಾಯಿ ದಂಡ ಕಟ್ಟುವಂತಾಗಿದೆ. ಹಲವು ಅಪಘಾತಗಳಿಗೆ ನಿಯಮ ಉಲ್ಲಂಘನೆಯೇ ಕಾರಣವಾಗಿದೆ. ‘ರಿಯಲ್‌ ರನ್ನಿಂಗ್‌ ಟೈಮ್‌’ ಆಧಾರದ ಮೇಲೆ ಟ್ರಿಪ್‌ಗಳನ್ನು ನಡೆಸಲು ಸಮಯ ಪರಿಷ್ಕರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಂಚಾರ ನಿಯಮ ಉಲ್ಲಂಘನೆಯ ವಿಡಿಯೊಗಳನ್ನು ಪೊಲೀಸ್‌ ಟ್ರಾಫಿಕ್‌ ಕಮಾಂಡ್‌ ಸೆಂಟರ್‌ನ ಮುಖ್ಯಸ್ಥರಾದ ಎಸಿಪಿ ಶಶಿಕಲಾ, ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಅನಿಲ್‌ ಕುಮಾರ್‌ ಪ್ರದರ್ಶಿಸಿ ಅರಿವು ಮೂಡಿಸಿದರು.

ಪ್ರತಿದಿನ 50 ಚಾಲಕರಂತೆ ಡಿಸೆಂಬರ್‌ 30ರ ವರೆಗೆ  ಟ್ರಾಫಿಕ್‌ ಕಮಾಂಡ್‌ ಸೆಂಟರ್‌ನಲ್ಲಿ ತರಬೇತಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT