ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಗರ್ಡರ್‌ ಬದಲಾವಣೆಗಾಗಿ ರೈಲು ರದ್ದು

Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಿಟ್ಟೂರು–ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವೆ ಇರುವ ಲೆವೆಲ್‌ ಕ್ರಾಸಿಂಗ್‌ನಲ್ಲಿ ಹಳಿಯಲ್ಲಿ ಗರ್ಡರ್‌ ಅಳವಡಿಸುವ ಮತ್ತು ತೆಗೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್‌ 27ರಿಂದ ಜುಲೈ 4ರವರೆಗೆ 8 ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಲವನ್ನು ಭಾಗಶಃ ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

ತುಮಕೂರು–ಚಾಮರಾಜನಗರ, ಚಾಮರಾಜನಗರ–ಮೈಸೂರು, ಚಾಮರಾಜನಗರ–ಯಶವಂತಪುರ, ಯಶವಂತಪುರ–ಚಾಮರಾಜನಗರ, ತುಮಕೂರು–ಕೆಎಸ್‌ಆರ್‌ ಬೆಂಗಳೂರು, ಕೆಎಸ್‌ಆರ್‌ ಬೆಂಗಳೂರು–ತುಮಕೂರು, ಯಶವಂತಪುರ–ಶಿವಮೊಗ್ಗ, ಶಿವಮೊಗ್ಗ–ಯಶವಂತಪುರ ರೈಲುಗಳನ್ನು ಈ ಅವಧಿಯಲ್ಲಿ ರದ್ದು ಮಾಡಲಾಗಿದೆ.

ಕೆಎಸ್‌ಆರ್‌ ಬೆಂಗಳೂರು–ತುಮಕೂರು–ಕೆಎಸ್‌ಆರ್‌ ಬೆಂಗಳೂರು ರೈಲುಗಳನ್ನು ಹಿರೇಹಳ್ಳಿ–ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ–ಕೆಎಸ್‌ಆರ್‌ ಬೆಂಗಳೂರು ರೈಲು, ಕೆಎಸ್‌ಆರ್‌ ಬೆಂಗಳೂರು–ಧಾರವಾಡ–ಕೆಎಸ್‌ಆರ್‌ ಬೆಂಗಳೂರು ರೈಲುಗಳು ಅರಸೀಕರೆ–ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.

ವಾಸ್ಕೊ ಡ ಗಾಮ–ಯಶವಂತಪುರ ರೈಲು, ಮೈಸೂರು– ವಾರಾಣಸಿ, ಯಶವಂತಪುರ–ಜೈಪುರ, ಮೈಸೂರು–ಬೆಳಗಾವಿ ರೈಲುಗಳು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ. ಮೈಸೂರು–ಉದಯಪುರ ರೈಲು ಕೆಎಸ್‌ಆರ್‌ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ, ದಾವಣಗೆರೆಗೆ ತೆರಳಲಿದೆ.

ಯಶವಂತಪುರ–ಎಚ್‌. ನಿಜಾಮುದ್ದೀನ್‌, ಕೆಎಸ್‌ಆರ್‌ ಬೆಂಗಳೂರು–ತಾಳಗುಪ್ಪ, ಬೆಳಗಾವಿ–ಮೈಸೂರು, ಚಾಮರಾಜನಗರ–ತುಮಕೂರು, ಯಶವಂತಪುರ–ವಾಸ್ಕೊ ಡ ಗಾಮ, ತುಮಕೂರು–ಶಿವಮೊಗ್ಗ ರೈಲುಗಳ ಸಮಯವನ್ನು ಮರುನಿಗದಿ ಮಾಡಲಾಗಿದೆ. ಈ ರೈಲುಗಳು ತಡವಾಗಿ ಚಲಿಸಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT