ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ಗೆ ವಿಶೇಷ ಆತಿಥ್ಯ ಬೆನ್ನಲ್ಲೇ ರಾಜ್ಯದ ಕಾರಾಗೃಹಗಳ 43 ಸಿಬ್ಬಂದಿ ವರ್ಗಾವಣೆ

Published : 14 ಸೆಪ್ಟೆಂಬರ್ 2024, 15:37 IST
Last Updated : 14 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣದ ಬೆನ್ನಲ್ಲೇ ರಾಜ್ಯದ ವಿವಿಧ ಕಾರಾಗೃಹಗಳ 43 ಸಿಬ್ಬಂದಿಯನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಜೈಲ‌ರ್ ಶಂಭು ಷಣ್ಮುಖಪ್ಪ ವೆನ್ನಾಲ – ಕೇಂದ್ರ ಕಾರಾಗೃಹ ಬೆಂಗಳೂರು, ಮುಖ್ಯ ವೀಕ್ಷಕಿ ಸುಮಿತ್ರಾ ಎಂ.ರಾಠೋಡ-ಕೇಂದ್ರ ಕಾರಾಗೃಹ ವಿಜಯಪುರ, ಹೆಡ್ ವಾರ್ಡರ್ ಗಣಪತಿ- ಸಾಗರ ಉಪ ಕಾರಾಗೃಹ, ಹೆಡ್ ವಾರ್ಡರ್ ಬಸವರಾಜ ಜಾಧವ-ಕೇಂದ್ರ ಕಾರಾಗೃಹ ಧಾರವಾಡ, ಹೆಡ್ ವಾರ್ಡರ್ ಪ್ರಭು- ಕೇಂದ್ರ ಕಾರಾಗೃಹ ಕಲಬುರಗಿಗೆ ವರ್ಗಾಯಿಸಲಾಗಿದೆ.

ಮುಖ್ಯ ವೀಕ್ಷಕಿ ಶೈಲ ಸಿ.ಕೆ.- ಜಿಲ್ಲಾ ಕಾರಾಗೃಹ ದಾವಣಗೆರೆ, ವೀಕ್ಷಕ- ಜಿ.ಜಿ.ಮಂಜುನಾಥ-ತಾಲ್ಲೂಕು ಉಪ ಕಾರಾಗೃಹ ಹುಬ್ಬಳ್ಳಿ, ವೀಕ್ಷಕ ಸಂತೋಷ್ ಕರಿಯಣ್ಣನವರ- ಜಿಲ್ಲಾ ಕಾರಾಗೃಹ ದಾವಣಗೆರೆ, ವೀಕ್ಷಕ ಶಿವಾನಂದ ಧನಪಾಲ್ ಕಾಂಬಳೆ –ಕೇಂದ್ರ ಕಾರಾಗೃಹ ವಿಜಯಪುರ, ವೀಕ್ಷಕ ಶಿವ ಲಮಾಣಿ- ಜಿಲ್ಲಾ ಕಾರಾಗೃಹ, ಗದಗ, ವೀಕ್ಷಕ ನೂರಲಿ ಹುಸೇನಸಾಬ ಮುಜಾವರ -ಕೇಂದ್ರ ಕಾರಾಗೃಹ ವಿಜಯಪುರ, ವೀಕ್ಷಕ ಸಿ.ಎಂ.ಶಿವಕುಮಾರ್- ಕೇಂದ್ರ ಕಾರಾಗೃಹ ಕಲಬುರಗಿ, ವೀಕ್ಷಕ ಮಂಜುನಾಥ ಕಟಗಿ- ಜಿಲ್ಲಾ ಕಾರಾಗೃಹ ಹಾವೇರಿ, ವೀಕ್ಷಕ ರಮೇಶ್ ಎಂ.ವಾಲಿ, ಕೇಂದ್ರ ಕಾರಾಗೃಹ ವಿಜಯಪುರ, ವೀಕ್ಷಕ ಶ್ರೀನಿವಾಸ –ಜಿಲ್ಲಾ ಕಾರಾಗೃಹ ಯಾದಗಿರಿ, ವೀಕ್ಷಕ ಶ್ರೀನಾಥ್‌ ರಾಠೋಡ–ಜಿಲ್ಲಾ ಕಾರಾಗೃಹ ಕಾರವಾರ, ವೀಕ್ಷಕ ವಿ.ಮಂಜುನಾಥ್–ಕೇಂದ್ರ ಕಾರಾಗೃಹ ಮೈಸೂರು, ವೀಕ್ಷಕ ಸಚಿನ್ ಯಲಿಗಾರ–ತಾಲ್ಲೂಕು ಉಪಕಾರಾಗೃಹ ಹುಬ್ಭಳ್ಳಿ, ವೀಕ್ಷಕ ಎಂ.ವಿಜಯ–ಜಿಲ್ಲಾ ಕಾರಾಗೃಹ ಚಿತ್ರದುರ್ಗ, ವೀಕ್ಷಕ ಅನಿಲ್ ಕುಮಾರ್– ಜಿಲ್ಲಾ ಕಾರಾಗೃಹ ಕೊಪ್ಪಳ, ಸಂಗಮೇಶ ಎಸ್. ಗಿಣಿ–ಕೇಂದ್ರ ಕಾರಾಗೃಹ ವಿಜಯಪುರಕ್ಕೆ ವರ್ಗ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT