ಭಾನುವಾರ, ಜುಲೈ 25, 2021
26 °C

'ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಅಗತ್ಯ ಸೇವೆಗಳಲ್ಲಿ ಟ್ಯಾಕ್ಸಿಯೂ ಒಂದಾಗಿದ್ದು, ಲಾಕ್‍ಡೌನ್ ಸಮಯದಲ್ಲಿ ಜನರ ತುರ್ತು ಸೇವೆಗಳಿಗಾಗಿ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಬೇಕು' ಎಂದು ರಾಜ್ಯ ಟ್ರಾವೆಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಮನವಿ ಮಾಡಿದ್ದಾರೆ.

'ವೃದ್ಧರು, ರೋಗಿಗಳು ಹಾಗೂ ವಾಹನ ವ್ಯವಸ್ಥೆ ಇಲ್ಲದೆ ಅಗತ್ಯ ಸೇವೆಗಳಿಗಾಗಿ ಮನೆಯಿಂದ ಹೊರಬರುವವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಇವರಿಗೆ ನೆರವಾಗುವ ದೃಷ್ಟಿಯಿಂದ ಟ್ಯಾಕ್ಸಿಗಳಲ್ಲಿ ಒಬ್ಬರು ಪ್ರಯಾಣಿಕರು ಸಂಚರಿಸಲು ಅನುಮತಿ ನೀಡಬೇಕು. ಲಾಕ್‍ಡೌನ್ ವೇಳೆ ಟ್ಯಾಕ್ಸಿ ಸಂಚಾರಕ್ಕೆ ನಿರ್ಬಂಧ ಹೇರಬಾರದು' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು