ಬೆಂಗಳೂರು: ನಗರದ ಹೊರ ವಲಯದ ಕನ್ನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ ಕೆಂಪೇಗೌಡ ಬಡಾವಣೆಯಲ್ಲಿ 100 ವರ್ಷಗಳಿಗೂ ಹಳೆಯ‘ಕಾಡು ಬೂರುಗ’ದ ಮರವೊಂದಿದ್ದು, ಅದನ್ನು ಉಳಿಸಲು ಗ್ರಾಮಸ್ಥರು ಪಣ ತೊಟ್ಟಿದ್ದಾರೆ.

ಬಡಾವಣೆಯ ಬಟಾಬಯಲಿನಲ್ಲಿ ಹಳೆಯದಾದ ಹೆಸರಿನ ದೊಡ್ಡ ಮರವೊಂದಿದೆ. ಇದರೊಂದಿಗೆ ಇದ್ದ ನೂರಾರು ಮರಗಳು ಈಗ ಇಲ್ಲ, ಅದೃಷ್ಟವಶಾತ್ ಈ ಮರಕ್ಕೆ ಕೊಡಲಿ ಏಟು ಬಿದ್ದಿಲ್ಲ.

‘ರಾಜಕಾಲುವೆ ನಿರ್ಮಾಣಕ್ಕಾಗಿ ಮರ ಕಡಿಯಲು ಬಿಡಿಎ ಅಧಿಕಾರಿಗಳು ಗುರುತು ಮಾಡಿದ್ದರು. ಆದರೆ, ಅದಕ್ಕೆ ಅವಕಾಶ ಕೊಟ್ಟಿಲ್ಲ. ಈ ಮರ ನಮಗೆ ದೇವರ ಸಮಾನ. ಐದಾರು ತಲೆಮಾರುಗಳಿಂದ ಈ ಮರದೊಂದಿಗೆ ಭಾವನಾತ್ಮಕವಾಗಿ ಬೆರೆತಿದ್ದೇವೆ’ ಎಂದು ಗ್ರಾಮಸ್ಥರು ಹೇಳಿದರು.

‘ನಿತ್ಯ 80ರಿಂದ 100 ನವಿಲುಗಳು ಈ ಮರದಲ್ಲಿ ಆಶ್ರಯ ಪಡೆಯುತ್ತಿವೆ. ಈ ಮರ ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ’ ಎಂದು ಧರ್ಮೇಂದ್ರ ಕುಮಾರ್ ಎಂಬುದು ವಿಡಿಯೊ ಮಾಡಿ ಫೇಸ್ಬುಕ್ನಲ್ಲೂ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.