ಬೆಂಗಳೂರು: ಕಂಟೋನ್ಮೆಂಟ್ ಪ್ರದೇಶದಲ್ಲಿರುವ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಅಭಿವೃದ್ಧಿಗಾಗಿ 368 ಮರಗಳನ್ನು ಕಡಿಯಬಾರದು ಎಂದು ಆಗ್ರಹಿಸಿ, ಪರಿಸರಕ್ಕಾಗಿ ನಾವು ಸಂಘಟನೆ ವತಿಯಿಂದ ‘ವೃಕ್ಷ ರಕ್ಷಾ ಅಭಿಯಾನ’ ಆಯೋಜಿಸಲಾಗಿದೆ.

‘ಪ್ರಗತಿ ಹೆಸರಿನಲ್ಲಿ ಪ್ರಕೃತಿ ಧ್ವಂಸ ಮಾಡಬಾರದು. ಪ್ರಗತಿ– ಪ್ರಕೃತಿ ಒಂದೇ ಸ್ತರದಲ್ಲಿ ನಡೆದು, ಸುಸ್ಥಿರ ಅಭಿವೃದ್ಧಿಯಾಗಬೇಕು. ಮರಗಳನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ. ಹೀಗಾಗಿ, 368 ಮರಗಳನ್ನೂ ಉಳಿಸಬೇಕು ಎಂದು ಪರಿಸರ ದಿನವಾದ ಜೂನ್ 5ರಂದು, ರೈಲ್ವೆ ಕಾಲೊನಿಯಲ್ಲಿ ಅಭಿಯಾನ ನಡೆಸಲಾಗುತ್ತದೆ’ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ಉದ್ಯಾನ ನಗರಿ, ಸುಂದರ ನಗರಿಯಾಗಿದ್ದ ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿ ಬೃಹತ್ ಮರಗಳನ್ನು ಕಡಿಯುವ ಮೂಲಕ ನಗರಕ್ಕೆ ದೊಡ್ಡ ಕಳಂಕ ಎದುರಾಗಿದೆ. ನೀರು, ಗಾಳಿ, ಆಹಾರ ಶುದ್ಧವಾಗಿರಬೇಕು. ಇದರ ಬಗ್ಗೆ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಆಘಾತ ಎದುರಾಗುತ್ತದೆ’ ಎಂದರು.

‘ಕಂಟೋನ್ಮೆಂಟ್ ರೈಲ್ವೆ ಕಾಲೊನಿಯಲ್ಲಿ ಬಾಗ್ಮನೆಯವರಿಗೆ ವಾಣಿಜ್ಯ ಕಟ್ಟಡ ನಿರ್ಮಿಸಲು ಭೂಮಿ ನೀಡಲು ರಾಜ್ಯ–ಕೇಂದ್ರ ಸರ್ಕಾರದ ಅಧಿಕಾರಿಗಳು ಕೈಜೋಡಿಸಿದ್ದಾರೆ. ಇವರು ಕಡಿಯಲು ಉದ್ದೇಶಿಸಿರುವ 368 ಮರಗಳಲ್ಲಿ 84 ಪಾರಂಪರಿಕ ಮರಗಳಿವೆ. ಇನ್ನು ಉಳಿದವು ನೂರಾರು ವರ್ಷಗಳಿಂದ ಇವೆ. ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಎಲ್ಲ ನಾಗರಿಕರೂ ಮರಗಳನ್ನು ಕಡಿಯಬಾರದು ಎಂದು ಹೇಳಿದ್ದಾರೆ. ಆದರೂ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದರು.

‘ಕ್ಲೀನ್ ಸಿಟಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಮುಖಂಡರು, ಹಸಿರು ಬೆಂಗಳೂರನ್ನಾಗಿ ಮಾಡುವತ್ತ ಗಮನಹರಿಸಬೇಕು. ನಗರದಲ್ಲಿ ಕಸದ ಹೆಸರಿನಲ್ಲಿ ಹಣ ಮಾಡುವಂತಹವರಿಗೆ ಅಂಕುಶ ಹಾಕಬೇಕು. ಅರಣ್ಯ ಕಾಯ್ದೆ ಇದ್ದರೆ ಸಾಲದು, ಅದನ್ನು ಅನುಷ್ಠಾನ ಮಾಡಬೇಕು. ಅಧಿಕಾರದಲ್ಲಿರುವವರು ಬಾಯಿಮಾತಿಗೆ ಅಥವಾ ಪತ್ರದಲ್ಲಿ ಮಾತ್ರ ಅರಣ್ಯ ಉಳಿಸುವ, ಮರಗಳನ್ನು ರಕ್ಷಿಸುವ ಮಾತಾಡಿದರೆ ಸಾಲದು, ಕೃತಿಯಲ್ಲೂ ಇರಬೇಕು’ ಎಂದು ರಾಮಸ್ವಾಮಿ ಆಗ್ರಹಿಸಿದರು.

‘ವಿಶ್ವದಲ್ಲಿ ಹವಾಮಾನ ಬದಲಾವಣೆಯ ದುಷ್ಪರಿಣಾಮದಿಂದ ಜೀವವೈವಿಧ್ಯವೂ ಹಾಳಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ರಕ್ಷಿಸುವ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮರಗಳನ್ನು ಕಡಿಯುವ ಪ್ರಕ್ರಿಯೆಯನ್ನು ಕೈಬಿಡಬೇಕು’ ಎಂದು ಸಂಘಟನೆಯ ಗೌರವಾಧ್ಯಕ್ಷ ಎಸ್. ಮರಿಸ್ವಾಮಿ ಒತ್ತಾಯಿಸಿದರು.

‘ನಗರದಲ್ಲಿ ಶೇ 3ರಷ್ಟು ಮಾತ್ರ ಹಸಿರಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಪ್ರಮಾಣ ಶೇ 55ರಷ್ಟಿದೆ. ನಗರದಲ್ಲಿ ಹಸಿರಿನ ಪ್ರಮಾಣವನ್ನು ಶೇ 33ಕ್ಕಾದರೂ ಹೆಚ್ಚಿಸಬೇಕು. ಗಿಡ ನೆಟ್ಟರೆ ಸಾಲದು, ಅದನ್ನು ಪೋಷಿಸಬೇಕು. ಇರುವ ಮರಗಳನ್ನು ಸಂರಕ್ಷಿಸಬೇಕು’ ಎಂದು ಪ್ರೊ. ರೇಣುಕಾ ಪ್ರಸಾದ್ ಹೇಳಿದರು.

ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರನಾಥ್ ಸಿರಿವರ, ಸದಸ್ಯರಾದ ಡಾ. ಕಲ್ಪನಾ ವಿಶ್ವನಾಥ್, ಶೈಲಜಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.