ಶನಿವಾರ, ನವೆಂಬರ್ 23, 2019
18 °C
ಶಾಲಾ ವಾಹನದ ಮೇಲೆ ಬಿದ್ದ ಮರ

ಶಾಲಾ ವಾಹನದ ಮೇಲೆ ಬಿದ್ದ ಮರ: 32 ವಿದ್ಯಾರ್ಥಿಗಳು ಪಾರು

Published:
Updated:
Prajavani

ವೈಟ್ ಫೀಲ್ಡ್: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನದ (ಬಸ್‌) ಮೇಲೆ ದೊಡ್ಡ ಮರ ಉರುಳಿ ಬಿದ್ದ ಘಟನೆ ವರ್ತೂರು ಮುಖ್ಯರಸ್ತೆಯ ವಿನಾಯಕ ಚಿತ್ರಮಂದಿರದ ಮುಂಭಾಗದಲ್ಲಿ ಸೋಮವಾರ ಮಧ್ಯಾಹ್ನ 3.45ರ ಸುಮಾರಿಗೆ ಸಂಭವಿಸಿದೆ.

ಘಟನೆಯಲ್ಲಿ ಬಸ್ ಜಖಂಗೊಂಡಿದ್ದು, ಒಳಗಿದ್ದ ‘ದಿ ಇಂಟರ್‌ನ್ಯಾಷನಲ್ ಸ್ಕೂಲ್ ಆಫ್‌ ಬೆಂಗಳೂರು’ ಸಂಸ್ಥೆಯ ಎಲ್ಲ 32 ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ವಾಹನವು ಮಕ್ಕಳನ್ನು ಕರೆದುಕೊಂಡು ವರ್ತೂರು ಕಡೆ ಸಂಚರಿಸುತ್ತಿತ್ತು. ಈ ವೇಳೆ ರಸ್ತೆ ಬದಿಯಲ್ಲಿದ್ದ ‌ಮರ ರಸ್ತೆ ಬದಿಯಲ್ಲಿ ನಿಂತಿದ್ದ ಟೆಂಪೊ ಮತ್ತು ಶಾಲಾ ವಾಹನದ ಮೇಲೆ ಉರುಳಿ ಬಿದ್ದಿದೆ.

ಮೊದಲು ಟೆಂಪೋ ಮೇಲೆ ಮರ ಬಿದ್ದಿದೆ. ಈ ವೇಳೆ ಚಲಿಸುತ್ತಿದ್ದ ಶಾಲಾ ವಾಹನವನ್ನು ಚಾಲಕ ಸಿದ್ದೇಶ್ ಸಮಯಪ್ರಜ್ಞೆ ಮೆರೆದು ತಕ್ಷಣ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಪ್ರತಿಕ್ರಿಯಿಸಿ (+)