ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಭೂಕಂಪನಕ್ಕೆ ‘ಭೂಗತ ಜಲಕಂಪನ‘ ಕಾರಣ: ಎನ್‌ಜಿಆರ್‌ಐ

Last Updated 15 ಅಕ್ಟೋಬರ್ 2021, 14:42 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಸರಣಿ ಭೂಕಂಪನವು ಭೂಗತ ಜಲಕಂಪನ(hydro-seismicity)ಎಂಬ ವಿದ್ಯಮಾನಕ್ಕೆ ಸಂಬಂಧಿಸಿದೆ. ಇದು ಸಾಮಾನ್ಯವಾಗಿ ಮಳೆಗಾಲದ ನಂತರ ಸಂಭವಿಸುತ್ತದೆ ಎಂದು ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಜಿಆರ್‌ಐ)ನ ಪ್ರಾಥಮಿಕ ಅಧ್ಯಯನವು ಬಹಿರಂಗಪಡಿಸಿದೆ.

‘ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತಿರುವ ಕಂಪನಗಳ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ನಡೆಸುವಂತೆ ನಾವು ಎನ್‌ಆರ್‌ಜಿಐಗೆ ಮನವಿ ಮಾಡಿದ್ದೆವು’ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

‘ಈ ಪ್ರಕೃತಿಯ ಸೂಕ್ಷ್ಮ ಕಂಪನಗಳು ಸಾಮಾನ್ಯವಾಗಿ ಮಳೆಗಾಲದ ನಂತರದ ಅವಧಿಯಲ್ಲಿ ಸಂಭವಿಸುತ್ತವೆ ಎಂದು ಅವರ ಪ್ರಾಥಮಿಕ ಅವಲೋಕನಗಳು ಸೂಚಿಸಿವೆ. ಇದು ಭಾರೀ ಮಳೆಯ ನಂತರದ ‘ಭೂಗತ ಜಲಕಂಪನ’ ಎಂಬ ವಿದ್ಯಮಾನಕ್ಕೆ ಸಂಬಂಧಿಸಿದೆ’ ಎಂದು ರಾಜನ್ ಹೇಳಿದರು. ಅಂತರ್ಜಲದ ರೀಚಾರ್ಜ್ ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚಿದಾಗ ಭೂಮಿಯ ಒತ್ತಡವನ್ನು ಹೆಚ್ಚಾಗುತ್ತದೆ. ಈ ವಿದ್ಯಮಾನವು ಸೂಕ್ಷ್ಮ ಕಂಪನಗಳನ್ನು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಇಲ್ಲಿ ಶಬ್ದವೂ ಕೇಳಿಬರುತ್ತದೆ ಎಂದು ಅಧಿಕಾರಿ ಹೇಳಿದರು.

‘ಇವು ಭೂಮಿಯ ಆವರ್ತನದ ಮೇಲ್ಮೈ ಮೇಲೆ ಕಂಪನಗಳನ್ನು ಉಂಟುಮಾಡುವ ಆಳವಿಲ್ಲದ ಭೂಕಂಪನವಾಗಿವೆ. ಈ ರೀತಿಯ ಕಂಪನಗಳು ತುಂಬಾ ಸಾಮಾನ್ಯವಾಗಿವೆ ಮತ್ತು ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ, ಇದು ದೊಡ್ಡ ವಿನಾಶಕಾರಿ ಭೂಕಂಪಕ್ಕೆ ಕಾರಣವಾಗದಿರಬಹುದು’ಎಂದು ಅಧಿಕಾರಿ ಹೇಳಿದರು. ಮುಂದಿನ ಎರಡು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಅಧ್ಯಯನ ಮಾಡಲು ಮತ್ತು ಕ್ಷೇತ್ರದ ಪರಿಸ್ಥಿತಿಗಳನ್ನು ಅರಿಯಲು ಎನ್‌ಜಿಆರ್‌ಐ, ವಿಜ್ಞಾನಿಗಳ ತಂಡವನ್ನು ಕಳುಹಿಸಿಕೊಡಲಿದೆ ಎಂದು ರಾಜನ್ ಹೇಳಿದರು.

ಬೀದರ್‌ನ ಬಸವಕಲ್ಯಾಣ ಮತ್ತು ಕಲಬುರಗಿಯ ಚಿಂಚೋಳಿ ಸಮೀಪದ ಹಳ್ಳಿಗಳಲ್ಲಿ ಅಕ್ಟೋಬರ್ 6 ರಿಂದ ಅಕ್ಟೋಬರ್ 12 ರವರೆಗೆ ರಿಕ್ಟರ್ ಮಾಪಕದಲ್ಲಿ 2.5 ರಿಂದ 4 ರವರೆಗಿನ ಕನಿಷ್ಠ 6 ಕಂಪನಗಳು ಸಂಭವಿಸಿವೆ. ಗಾಬರಿಗೊಂಡ ಗ್ರಾಮಸ್ಥರು ಭಯದಿಂದಲೇ ರಾತ್ರಿಗಳನ್ನು ಕಳೆದಿದ್ದಾರೆ. ಕೆಲವರು ಊರು ಬಿಟ್ಟು ಬೇರೆಡೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT