ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್ 2021: ಯಾವುದೇ ತೆರಿಗೆ ಭಾರ ಇಲ್ಲ, ಇಲ್ಲಿವೆ ಮುಖ್ಯಾಂಶಗಳು

Last Updated 27 ಮಾರ್ಚ್ 2021, 5:27 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯು 2021-22ನೇ ಸಾಲಿಗೆ ₹9287.81 ಕೋಟಿ ವೆಚ್ಚದ ಬಜೆಟ್ ಮಂಡಿಸಿದೆ.

ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಶನಿವಾರ ಬಜೆಟ್ ಮಂಡಿಸಿದರು.

ಒಟ್ಟು ₹9287.81 ಕೋಟಿ ಆದಾಯ ನಿರೀಕ್ಷಿಸಿ ಹಾಗೂ ₹9286.86 ಕೋಟಿ ವೆಚ್ಚ ನಿರೀಕ್ಷಿಸಿ ಆಯವ್ಯಯ ಮಂಡಿಸಿದರು.

ಬಜೆಟ್‌ ಮುಖ್ಯಾಂಶಗಳು...

* ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ.

* ವಲಯಗಳು, ವಿಧಾನಸಭಾ ಕ್ಷೇತ್ರ ಗಾಗೂ ವಾರ್ಡ್‌ಗಳ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ₹2000 ಕೋಟಿ ಹಂಚಿಕೆ ಮಾಡಲಾಗಿದೆ‌.

*ಆಸ್ತಿ ತೆರಿಗೆ ಸಂಗ್ರಹ ಉತ್ತೇಜನಕ್ಕೆ ಆಯಾ ವಾರ್ಡ್‌ನಲ್ಲಿ ಸಂಗ್ರಹವಾಗುವ ಶೇ 1ರಷ್ಟು ಅನುದಾನ ಅದೇ ವಾರ್ಡ್‌ಗೆ ಮೀಸಲು

* ಕಸದ ರಾಶಿ ಕಂಡುಬಾರದ ವಾರ್ಡ್‌ಗೆ ₹50 ಲಕ್ಷ ಪ್ರೋತ್ಸಾಹಧನ

* ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ರಸ್ತರ ಅಭಿವೃದ್ಧಿಗೆ ₹1000 ಕೋಟಿ ಮೀಸಲು

* ಕೋವಿಡ್ ನಿಯಂತ್ರಣ ವೆಚ್ಚ ಭರಿಸಲು ಸರ್ಕಾರ ₹300 ಕೋಟಿ ನೀಡಿದೆ. ಪಾಲಿಕೆ ₹ 90 ಭರಿಸಿದೆ.

* ಇ– ಆಸ್ತಿ ತಂತ್ರಾಂಶವನ್ನು ಎಲ್ಲ ವಾರ್ಡ್ಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

* ಬೀದಿನಾಯಿ ಹಾವಳಿ ತಡೆಗೆ ₹5 ಕೋಟಿ ಮೀಸಲು

*ಆಸ್ತಿಗೆ ಸಂಬಂಧಿಸಿ ಬಿ– ಖಾತಾ ನಿರ್ವಹಣೆ ರದ್ದು ಪಡಿಸಿ ಎ–ಖಾತಾ ಮಾತ್ರ ನಿರ್ವಹಿಸಲು ತೀರ್ಮಾನ

*ಒಂಟಿ ಮನೆ ಯೋಜನೆ ಹೊಸ ಫಲಾನುಭವಿ ಆಯ್ಕೆ ಇಲ್ಲ

* ವೈದ್ಯಕೀಯ ವೆಚ್ಚ ಮರುಪಾವತಿಗೆ ₹25 ಕೋಟಿ

* ಪಾದಚಾರಿ ಮಾರ್ಗ ದುರಸ್ತಿಗೆ ಪ್ರತಿ ವಾರ್ಡ್‌ಗೆ ₹20 ಲಕ್ಷ

* ಉದ್ಯಾನ ನಿರ್ವಹಣೆಗೆ ಹಾಗೂ ಪರಿಸರ ನಿರ್ವಹಣೆಗೆ ₹214 ಕೋಟಿ

* ಅರಣ್ಯ ಇಲಾಖೆಗೆ ₹39 ಕೋಟಿ

* ಹಸಿರು ಸೂಚ್ಯಂಕ ಹೆಚ್ಚಳ 10 ಲಕ್ಷ ಸಸಿ ನೆಡುವ ಗುರಿ

* ರಾಜಕಾಲುವೆ ಹೂಳೆತ್ತಿ ನಿರ್ವಹಣೆಗೆ ₹60 ಕೋಟಿ

* ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳ ನಿರ್ವಹಣೆಗೆ ₹31 ಕೋಟಿ

* ಕೆರೆ ದತ್ತು ಯೋಜನೆ ಜಾರಿ

* 330 ಆಸನವಿರುವಂತೆ ಕೌನ್ಸಿಲ್ ಸಭಾಂಗಣ ಮೇಲ್ದರ್ಜೆಗೆ ಏರಿಸಲು ₹10 ಕೋಟಿ

* ಈ ವರ್ಷ 10 ಸಾವಿರ ಬೀದಿ ದೀಪ ಅಳವಡಿಕೆ

* ಆರ್ಥಿಕ ಸಂಕಷ್ಟ ಇರುವುದರಿಂದ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೆರೆ ವಿಭಾಗ ಹೊರತಾಗಿ ಬೇರಾವುದೇ ವಿಭಾಗಕ್ಕೆ ಹೊಸ ಕಾರ್ಯಕ್ರಮ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT