ಶನಿವಾರ, ಜನವರಿ 25, 2020
22 °C
ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ಫೋರ್ಟಿಸ್ ವೈದ್ಯರು

ವೃದ್ಧನ ಹೊಟ್ಟೆಯಲ್ಲಿ 4.5 ಕೆ.ಜಿ ಗಡ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚೆನ್ನೈನ 87 ವರ್ಷದ ವೃದ್ಧರೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 4.5 ಕೆ.ಜಿ ತೂಕದ ಗಡ್ಡೆಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

ಹೊಟ್ಟೆಯ ಎಡಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿದ್ದರಿಂದ ವ್ಯಕ್ತಿಯ ತೂಕದಲ್ಲಿ ಶೇ 10 ರಷ್ಟು ಹೆಚ್ಚಳವಾಗಿತ್ತು. ಗಡ್ಡೆಯು ಹೊಟ್ಟೆಯನ್ನು ಆವರಿಸಿಕೊಂಡಿದ್ದರಿಂದ 2-3 ತಿಂಗಳಿಂದ ಊಟ ಸೇರದೆ ನಿತ್ರಾಣ ಸ್ಥಿತಿ ತಲುಪಿದ್ದ ವ್ಯಕ್ತಿ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆಯ ಆಳದಲ್ಲಿದ್ದ ಗಡ್ಡೆಯ ಗಾತ್ರ ದೊಡ್ಡದಾಗಿದ್ದರಿಂದ ಹೊರತೆಗೆಯುವುದು ಕಷ್ಟವಾಗಿತ್ತು. ಹೀಗಾಗಿ ಡಾ.ಸಂದೀಪ್ ನಾಯಕ್ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿತು.

‘ದೇಹದಲ್ಲಿ ಅಧಿಕ ಕೊಬ್ಬಿನ ಅಂಶ ಇರುವ ಭಾಗದಲ್ಲಿ ಈ ರೀತಿ ಗಡ್ಡೆಯ ಬೆಳವಣಿಗೆಯಾಗುತ್ತದೆ. ಶೇ 1ರಷ್ಟು ವಯಸ್ಕ ಕ್ಯಾನ್ಸರ್ ಪೀಡಿತರಲ್ಲಿ ಇದು ಕಂಡುಬರುತ್ತದೆ. ಶೇ 20 ರಷ್ಟು ಪ್ರಕರಣಗಳಲ್ಲಿ ಹೊಟ್ಟೆಯ ಹಿಂಭಾಗದಲ್ಲಿ ಈ ಗಡ್ಡೆ ಬೆಳೆಯುತ್ತದೆ’ ಎಂದು ಡಾ.ಸಂದೀಪ್ ನಾಯಕ್ ತಿಳಿಸಿದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು