ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮರೆಸಿದ ಲಕ್ಷ್ಮಿ ಹಬ್ಬ

ಮನೆ–ಮಂದಿಯೆಲ್ಲ ಮಾಸ್ಕ್‌ ಧರಿಸಿಕೊಂಡೇ ಸಂಭ್ರಮದಲ್ಲಿ ಭಾಗಿ
Last Updated 31 ಜುಲೈ 2020, 20:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದೆಲ್ಲೆಡೆ ವರಮಹಾ ಲಕ್ಷ್ಮೀ ಹಬ್ಬದ ಆಚರಣೆ ಶುಕ್ರವಾರ ನಡೆಯಿತು. ಹಬ್ಬದಂದು ಮನೆಗಳಲ್ಲಿ ಲಕ್ಷ್ಮೀ ಮೂರ್ತಿಯನ್ನು ನಾನಾ ಶೈಲಿಗಳಲ್ಲಿ ಕೂರಿಸಿ ಆರಾಧಿಸುವುದು ವಾಡಿಕೆ.

ಹಬ್ಬಕ್ಕೆ ಮಹಿಳೆಯರೆಲ್ಲಾ ನೆರೆಹೊರೆಯ ಮನೆಗಳಿಗೆ ತೆರಳಿ ಅರಿಶಿನ-ಕುಂಕುಮ ಸಹಿತ ಸಂಭ್ರಮ ಹಂಚಿಕೊಳ್ಳುತ್ತಾರೆ. ಆದರೆ, ಈ ಸಲ ಕೊರೊನಾ ಸೋಂಕಿನ ಕಾರಣದಿಂದ ಮನೆಯಲ್ಲೇ ಸರಳವಾಗಿ ಹಬ್ಬ ಆಚರಿಸಿದರು.

ಹಬ್ಬದ ವಾತಾವರಣ ಇದ್ದರೂ ಮನೆಗಳಲ್ಲಿ ಬಂಧುಗಳ ಸಂಖ್ಯೆ ಕಡಿಮೆಯಾಗಿತ್ತು. ಮನೆಮಂದಿಯೂ ಮಾಸ್ಕ್ ಧರಿಸಿಕೊಂಡು ಹಬ್ಬದ ಆಚರಣೆಯಲ್ಲಿ ತೊಡಗಿದರು.

ಮಾಸ್ಕ್ ಧರಿಸಿದವರಿಗೆ ದೇಗುಲ ಪ್ರವೇಶ: ಹಬ್ಬದ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

ಆದರೆ, ಕೊರೊನಾ ಇರುವ ಕಾರಣ ಮಾಸ್ಕ್ ಧರಿಸಿದವರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ಕಲ್ಪಿಸಲಾಯಿತು.

ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಭಕ್ತರ ದಂಡು ಸೇರಿತ್ತು. ಆದರೆ, ದರ್ಶನದ ವೇಳೆ ಸರತಿ ಸಾಲು, ಅಂತರ ಕಾಯ್ದುಕೊಳ್ಳುವುದು, ದೇವಸ್ಥಾನ ಪ್ರವೇಶಿಸಲು ಮಾಸ್ಕ್ ಧರಿಸುವುದು ಕಡ್ಡಾಯ
ವಾಗಿತ್ತು. ಭಕ್ತರಿಗಾಗಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಮಹಾಲಕ್ಷ್ಮೀ ಬಡಾವಣೆಯ ಪ್ರಸನ್ನ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಹಾಗೂ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

ಶೇಷಾದ್ರಿಪುರ ಹಾಗೂ ಗುಟ್ಟಹಳ್ಳಿಯ ಮಹಾಲಕ್ಷ್ಮೀ ದೇವಾಲಯ, ಮಲ್ಲೇಶ್ವರದ ಮಹಾಲಕ್ಷ್ಮೀ ದೇವಾಲಯ, ಕೋಟೆ ಶಿವ ದೇವಾಲಯ, ಶೃಂಗೇರಿ ಶಂಕರಮಠ ಶಾರದಾಂಬೆ ದೇವಸ್ಥಾನ ಹಾಗೂ ಕೋಟೆ ವೆಂಕಟರಮಣ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT