ಶುಕ್ರವಾರ, ಮಾರ್ಚ್ 24, 2023
22 °C

ವಸಿಷ್ಠ ಕ್ರೆಡಿಟ್ ಸೊಸೈಟಿ ಅಕ್ರಮ: ಠಾಣೆಗೆ ಹಾಜರಾದ ಅಪ್ಪ–ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀವಸಿಷ್ಠ ಕೋ–ಆಪ ರೇಟಿವ್ ಕ್ರೆಡಿಟ್ ಸೊಸೈಟಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಅಧ್ಯಕ್ಷ ವೇಂಕಟ ನಾರಾ ಯಣ ಹಾಗೂ ನಿರ್ದೇಶಕ ಕೃಷ್ಣಪ್ರಸಾದ್, ಹನುಮಂತ ನಗರ ಠಾಣೆಗೆ ಶುಕ್ರವಾರ ರಾತ್ರಿ ದಿಢೀರ್ ಹಾಜರಾದರು.

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಠೇವಣಿದಾರರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಆರೋಪದಡಿ ಪ್ರಕರಣ ದಾಖಲಾಗು ತ್ತಿದ್ದಂತೆ ವೇಂಕಟನಾರಾಯಣ ಹಾಗೂ ಅವರ ಮಗ ಕೃಷ್ಣಪ್ರಸಾದ್ ತಲೆ ಮರೆಸಿ ಕೊಂಡು ಓಡಾಡುತ್ತಿದ್ದರು.

ಬಂಧನ ಭೀತಿಯಿಂದ ಅವರಿಬ್ಬರು, ನಿರೀಕ್ಷಣಾ ಜಾಮೀನು ಕೋರಿ ಸಿಸಿಎಚ್ 56ನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆ ಸಿದ ನ್ಯಾಯಾಲಯ, ಅರ್ಜಿಯನ್ನು ತಿರ ಸ್ಕರಿಸಿದೆ. ಇದರ ಬೆನ್ನಲ್ಲೇ ಇಬ್ಬರೂ ಆರೋಪಿಗಳು, ತನಿಖಾಧಿಕಾರಿ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದರು.

‘ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ವಿಚಾರಣೆಗೆ ಬರುವಂತೆಯೂ ಆರೋಪಿಗಳ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಆರೋಪಿಗಳು, ಜಾಮೀನು ಕೋರಿದ್ದರು. ಅವರಿಬ್ಬರ ಅರ್ಜಿ ತಿರಸ್ಕೃತವಾಗಿದ್ದರಿಂದ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಠಾಣೆಗೆ ಬಂದಿದ್ದರು. ಇಬ್ಬರಿಂದಲೂ ಹೇಳಿಕೆ ಪಡೆಯಲಾಗಿದೆ. ಶನಿವಾರ ಬೆಳಿಗ್ಗೆ ಪುನಃ ವಿಚಾರಣೆಗಾಗಿ ಠಾಣೆಗೆ ಬರು ವಂತೆಯೂ ಸೂಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಈ ನಡುವೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ವೇಂಕಟನಾರಾಯಣ ರಾಜೀನಾಮೆ ಸಲ್ಲಿಸಿದ್ದಾರೆ.

‘₹ 7 ಕೋಟಿ ವಂಚನೆಗೆ ಪುರಾವೆ’
‘ಆರೋಪಿಗಳಿಂದ ಆಗಿರುವ ವಂಚನೆ ಬಗ್ಗೆ ಇದುವರೆಗೂ 50 ಠೇವಣಿದಾರರು ದೂರು ನೀಡಿದ್ದಾರೆ. ಸುಮಾರು ₹ 7 ಕೋಟಿ ವಂಚನೆ ಆಗಿರುವುದಕ್ಕೆ ಪುರಾವೆ ಗಳನ್ನು ಒದಗಿಸಿದ್ದಾರೆ. ವಂಚನೆ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ವಂಚನೆಗೀಡಾದವರು ಠಾಣೆಗೆ ಬಂದು ದೂರು ನೀಡಬಹುದು’ ಎಂದೂ ಮೂಲಗಳು ಕೋರಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು