‘ಐಎಫ್‌ಎಸ್ ಅಧಿಕಾರಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿ ವಂಚಿಸಿದ್ದರು. ಈ ಬಗ್ಗೆ ದೆಹಲಿಯ ಪೊಲೀಸರಿಗೆ ನಾನು ದೂರು ನೀಡಿದ್ದೆ. ಆ ಅಧಿಕಾರಿಯನ್ನು ಪ್ರಕರಣದಿಂದ ಹೊರತರಲು ಮುನಿರತ್ನ ಮತ್ತು ತಂಡ ಸಂಚು ರೂಪಿಸಿದ್ದರು. ಆ ತಂಡದ ಕೆಲವು ಯುವಕರು ನನ್ನನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ನನ್ನ ವಿರುದ್ಧವೇ ಹನಿಟ್ರ್ಯಾಪ್ ಪ್ರಕರಣ ದಾಖಲಿಸಿದ್ದರು’ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.