ಬೆಂಗಳೂರು: ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ನೀಡುವ ಪ್ರಶಸ್ತಿಗೆ ಗಾಯಕ ವಿದ್ಯಾಭೂಷಣ ಸೇರಿ ಮೂವರು ಆಯ್ಕೆಯಾಗಿದ್ದಾರೆ.

‘ಜೀವಮಾನ ಸಂಗೀತ ಸಾಧನೆ ಪ್ರಶಸ್ತಿ ಹಾಗೂ ‘ರಾಘವೇಂದ್ರ ಹರಿದಾಸ ಸಂಗೀತ ಸೇವಾ ಶಿರೋಮಣಿ’ ಬಿರುದಿಗೆ ವಿದ್ಯಾಭೂಷಣರು ಭಾಜನರಾಗಿದ್ದಾರೆ. ‘ಶ್ರೀಗುರುರಾಘವೆಂದ್ರ ಸಂಸ್ಮರಣ ಮರಣೋತ್ತರ ಪ್ರಶಸ್ತಿ’ಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ದಿವಂಗತ ಪಂಡಿತ್ ಮಾಧವ ಗುಡಿ, ‘ಬೆಳಗೆರೆ ಮಹಾಲಕ್ಷ್ಮಮ್ಮ ಸಂಸ್ಮರಣ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಿಮ್ಮಣ್ಣ ರಾಮಕೃಷ್ಣ ಭಟ್ಟ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹20 ಸಾವಿರ ನಗದು ಒಳಗೊಂಡಿವೆ.

ಪ್ರತಿಷ್ಠಾನವು 26ನೇ ವಾರ್ಷಿಕೋತ್ಸವ, ಪುರಂದರದಾಸರು, ಕನಕದಾಸರು ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ ಮತ್ತು ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಸಂಗೀತ–ನೃತ್ಯ ಕಾರ್ಯಕ್ರಮವನ್ನು ಇದೇ 19ರಿಂದ 22ರವರೆಗೆ ಬನಶಂಕರಿ 2ನೇ ಹಂತದಲ್ಲಿರುವ ದೇವಗಿರಿ ವರಪ್ರದ ವೆಂಕಟೇಶ್ವರ ದೇವಸ್ಥಾನದ ವೆಂಕೋಬಾಚಾರ್ಯ ಸ್ಮೃತಿ ಸಾಂಸ್ಕೃತಿಕ ಮಂಟಪದಲ್ಲಿ ಹಮ್ಮಿಕೊಂಡಿದೆ. ಪ್ರತಿನಿತ್ಯ ಸಂಜೆ 5 ಗಂಟೆಯಿಂದ ಕಾರ್ಯಕ್ರಮಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.