ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಭಾಸ್ಕರ್ ಜನ್ಮ ಶತಮಾನೋತ್ಸವ

Published : 19 ಸೆಪ್ಟೆಂಬರ್ 2024, 16:19 IST
Last Updated : 19 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ ಚಿತ್ರಗೀತೆಗಳಿಗೆ ಅನನ್ಯ ಗುಣಗಳನ್ನು ತುಂಬಿ, ಶ್ರೀಮಂತಗೊಳಿಸಿದವರು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ವಿಜಯಭಾಸ್ಕರ್ ಕುಟುಂಬ ವರ್ಗದವರು ಆಯೋಜಿಸಿದ್ದ ‘ವಿಜಯಭಾಸ್ಕರ್ ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಜಯಭಾಸ್ಕರ್ ಅವರ ಎಲ್ಲ ಸಂಯೋಜನೆಗಳೂ ಚಿತ್ರಗೀತೆಯ ಅಭ್ಯಾಸಕ್ಕೆ ಪಠ್ಯದಂತಿವೆ. ಭಾವಗೀತೆ ಪ್ರಕಾರಕ್ಕೂ ತಮ್ಮ ಆರಂಭಿಕ ಚಿತ್ರಗೀತೆಗಳಲ್ಲಿ ಭೂಮಿಕೆ ರೂಪಿಸಿದ್ದರು. ಮೂಡಣ ಮನೆಯ ಮುತ್ತಿನ ನೀರಿನ, ಬರೆದೆ ನೀನು ನಿನ್ನ ಹೆಸರ... ಮೊದಲಾದ ಅವರ ಸಂಯೋಜನೆಗಳು ಭಾವಗೀತೆ ಪ್ರಕಾರದ ಮೇಲೆ ಅಪಾರ ಪರಿಣಾಮ ಬೀರಿವೆ’ ಎಂದರು.

ವಿಜಯಭಾಸ್ಕರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಹೊರ ತಂದಿರುವ ವಿಶೇಷ ಅಂಚೆ ಲಕೋಟೆ ಮತ್ತು ಲಹರಿ ಸಂಗೀತ ಸಂಸ್ಥೆ ಹೊರ ತಂದಿರುವ ವಿಜಯಭಾಸ್ಕರ್ ಸಂಗೀತ ಸಂಯೋಜನೆಯ ಮಧುರ ಗೀತೆಗಳ ಎರಡು ಸಂಗೀತ ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮಾತನಾಡಿ, ‘ನಾನು ಬಾಲ್ಯದಲ್ಲಿ ನೋಡಿದ ಮೊದಲ ಚಿತ್ರವೇ ವಿಜಯಭಾಸ್ಕರ್ ಅವರ ಸ್ವರ ಸಂಯೋಜನೆಯ ಗೆಜ್ಜೆಪೂಜೆ. ಅವರ ಗೀತೆಗಳನ್ನು ಕೇಳುತ್ತಲೇ ಬೆಳೆದ ನನಗೆ ಅಂಚೆ ಲಕೋಟೆ ತರುವ ಅದೃಷ್ಟ ಸಿಕ್ಕಿದ್ದು ಸೌಭಾಗ್ಯ’ ಎಂದರು.

ಲಹರಿ ಸಂಸ್ಥೆಯ ಲಹರಿ ವೇಲು ಮಾತನಾಡಿ ‘ಬಾಲಕನಾಗಿದ್ದಾಗಿನಿಂದ ವಿಜಯಭಾಸ್ಕರ್ ಅವರ ಸ್ವರ ಸಂಯೋಜನೆ ಕೇಳುತ್ತಾ, ನೋಡುತ್ತಾ ಬೆಳೆದೆ. ಅವರ ಗೀತೆಗಳನ್ನು ನೂರಾರು ಸಲ ಕೇಳಿ ಆನಂದಿಸಿದ್ದೇನೆ. ಈ ಮೇರು ವ್ಯಕ್ತಿತ್ವಕ್ಕೆ ಸಂಗೀತ ಸುರಳಿಗಳ ಮೂಲಕ ನಮನ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.

ಗಾಯಕಿ ಬಿ.ಆರ್.ಛಾಯಾ ಅವರು ‘ಹಿಂದೂಸ್ತಾನವು ಎಂದೂ ಮರೆಯದ’ ಗೀತೆಯ ಮೂಲಕ ನುಡಿನಮನ ಸಲ್ಲಿಸಿದರು.

ಪತ್ರಕರ್ತ ಎನ್.ಎಸ್. ಶ್ರೀಧರ ಮೂರ್ತಿ, ವಿಜಯಭಾಸ್ಕರ್ ಅವರ ಮಕ್ಕಳಾದ ಶಂಕರಿ ಅನಂತ್ ಮತ್ತು ಮಂಗಳಗೌರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT