ಬೆಂಗಳೂರು: ‘ದಿ ವಿಲನ್’ ಚಿತ್ರದಲ್ಲಿ ವಿಜಯ ಪ್ರಕಾಶ್ ಅವರು ಧ್ವನಿ ನೀಡಿರುವ ಬೋಲೋ ಬೋಲೋ ಹಾಡಿನಲ್ಲಿರುವ ‘ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೇ’ ಎಂಬ ಸಾಲನ್ನು ತೆಗೆದು ಹಾಕುವಂತೆ ಅಂಧರ ಸಮುದಾಯ ಒತ್ತಾಯಿಸಿದೆ.

‘ಕೆಲವು ಕನ್ನಡ ಸಿನೆಮಾಗಳಲ್ಲಿ ಅಂಧರ ಬಗೆಗಿನ ಧೋರಣೆಗಳು, ಅಂಧರ ವ್ಯಕ್ತಿತ್ವಕ್ಕೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ವಿಷಯಗಳ ಹೆಚ್ಚಾಗಿವೆ. ಅಂಧ ಸಮುದಾಯವನ್ನು ಅಣಕಿಸುವ ರೀತಿಯಲ್ಲಿ ಮೂಡಿಬರುತ್ತಿರುವ ಚಿತ್ರಗಳ ವಿರುದ್ಧ ಹೋರಾಟ ನಡೆಸಬೇಕಿದೆ’ ಎಂದು ಸಮುದಾಯದ ಸದಸ್ಯ ಎಂ.ವೀರೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈ ನಿಟ್ಟಿನಲ್ಲಿ ಸಿನೆಮಾದಲ್ಲಿರುವ ಹಾಡಿನ ಸಾಲನ್ನು ತೆಗೆದು ಹಾಕದ ಪಕ್ಷದಲ್ಲಿ ಅ.18ರಂದು ಚಿತ್ರ ಪ್ರದರ್ಶವಾಗುವ ಪ್ರಧಾನ ಚಿತ್ರಮಂದಿರ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ’ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.