ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಸುರಂಗ ಕೊರೆದು ಹೊರಬಂದ ‘ವಿಂಧ್ಯಾ’

Last Updated 14 ಅಕ್ಟೋಬರ್ 2021, 2:14 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿಯಡಿ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯುವ ಕಾರ್ಯವನ್ನು ‘ವಿಂಧ್ಯಾ’ ಹೆಸರಿನ ಟಿಬಿಎಂ (ಸುರಂಗ ಕೊರೆಯುವ ಯಂತ್ರ)ಯಶಸ್ವಿಯಾಗಿ ಪೂರ್ಣಗೊಳಿಸಿ ಬುಧವಾರ ಹೊರಬಂದಿದೆ.

ಇದೇ ಮಾರ್ಗಕ್ಕೆ ಮತ್ತೊಂದು ಸುರಂಗ ಕೊರೆದಿದ್ದ ಮೊದಲ ಯಂತ್ರ ‘ಊರ್ಜಾ’ ಸೆ.22ರಂದು ಯಶಸ್ವಿಯಾಗಿ ಹೊರಬಂದಿತ್ತು.

ಈಗ ಸಮಾನಾಂತರಸುರಂಗ ಮಾರ್ಗ ಕೊರೆಯಲು ತೆರಳಿದ್ದ ವಿಂಧ್ಯಾ, ಶಿವಾಜಿನಗರ ಮೆಟ್ರೊ ನಿಲ್ದಾಣದ ದಕ್ಷಿಣ ತುದಿಯಲ್ಲಿ ಹೊರಬಂದಿದೆ. ಒಟ್ಟು 855 ಮೀಟರ್‌ ಉದ್ದದ ಸುರಂಗ ಕೊರೆಯುವ ಕೆಲಸವನ್ನು ವಿಂಧ್ಯಾ ಪೂರ್ಣಗೊಳಿಸಿದೆ.

‘ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ಈ ಯಂತ್ರವನ್ನು ಮರುಜೋಡಣೆ ಮಾಡಿ, ಈ ನಿಲ್ದಾಣದಿಂದ ಪಾಟರಿ ಟೌನ್‌ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯಲು ನಿಯೋಜಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT