ಬೆಂಗಳೂರು: ‘ಮುಂದಿನ ಬಜೆಟ್ನಲ್ಲಿ ವಿಶ್ವಕರ್ಮ ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಹೆಚ್ಚಿನ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಶೋಷಿತ ವರ್ಗಗಳಿಗೆ ದನಿ ನೀಡುವ ಕೆಲಸವನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ವರ್ಗಗಳಿಗೆ ಹಿಂದಿನ ಬಜೆಟ್ಗಳಲ್ಲೂ ಹೆಚ್ಚಿನ ಅನುದಾನ ನೀಡಿದ್ದು, ಅದನ್ನು ಈ ಬಾರಿಯೂ ಮುಂದುವರಿಸಲಿದೆ’ ಎಂದು ಹೇಳಿದರು.

‘ಕೆಲವರು ಈಗಲೂ ತಮ್ಮ ಕಸುಬಿಗೆ ಸೀಮಿತವಾಗಿದ್ದು, ಸರ್ಕಾರವೇ ಸೌಲಭ್ಯ ನೀಡಬೇಕು ಎನ್ನುವ ಮನಃಸ್ಥಿತಿ ಹೊಂದಿದ್ದಾರೆ. ಇದರಿಂದ ಎಲ್ಲಾ ಸಮುದಾಯದವರು ಹೊರ ಬರಬೇಕು. ಮಕ್ಕಳು ಉನ್ನತ ಶಿಕ್ಷಣ ಪಡೆದು ವಿವಿಧ ಹುದ್ದೆ ಪಡೆಯುವಂತೆ ಮಾಡಬೇಕು. ಉದ್ಯಮಿಗಳಾಗಿ ರೂಪುಗೊಳ್ಳಬೇಕು. ನೀವು ಬಯಸುವ ಸ್ಥಾನಕ್ಕೆ ಸುಮ್ಮನೇ ಯಾರೂ ನಿಮ್ಮನ್ನು ಕೂರಿಸುವುದಿಲ್ಲ. ಛಲದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿನ ಉನ್ನತ ಹುದ್ದೆಗಳನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಅರೇ ಮಾದನಹಳ್ಳಿಯ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಮಾತನಾಡಿ, ‘ಜಕಣಾಚಾರಿ ಎನ್ನುವವರು ಕಾಲ್ಪನಿಕ ವ್ಯಕ್ತಿ. ಅವರು ಯಾವುದೇ ಶಿಲ್ಪ ಕೆತ್ತನೆ ಮಾಡಿಲ್ಲ ಎನ್ನುವ ಅಭಿಪ್ರಾಯ ಮೂಡಿಸುವ ಪ್ರಯತ್ನ ಹಿಂದೆ ಆಗಿತ್ತು. ಆದರೆ ಹಲವಾರು ಗ್ರಂಥ, ನಾಡಗೀತೆಯಲ್ಲೂ ಜಕಣಾಚಾರಿ ಅವರ ಸಾಧನೆಯ ಉಲ್ಲೇಖವಿದೆ. ಈ ಕಾರಣದಿಂದಲೇ ಜಕಣಾಚಾರಿ ಅವರ ಸ್ಮರಣೆ ಕಾರ್ಯಕ್ರಮ ರೂಪಿಸಲು ಕೋರಿದಾಗ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿತು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮವನ್ನೂ ಸ್ಥಾಪಿಸಿ ಪ್ರಗತಿಗೆ ಒತ್ತು ನೀಡಿದೆ’ ಎಂದು ನುಡಿದರು.

‘ಕರ್ನಾಟಕದಲ್ಲಿ ಯುನೆಸ್ಕೊ ಮಾನ್ಯತೆ ಪಡೆದಂತಹ ಶಿಲ್ಪ ಕಲೆ ರೂಪಿಸಿದ್ದು ವಿಶ್ವಕರ್ಮರು. ಸರ್ವಧರ್ಮಗಳ ಶ್ರದ್ಧಾ ಕೇಂದ್ರಗಳಿಗೆ ರೂಪವನ್ನು ನೀಡಿದ್ದಾರೆ. ಜಕಣಾಚಾರಿ ಅವರ ಹೆಸರಿನಲ್ಲಿ ಸಂಸ್ಮರಣಾ ತಾಣವನ್ನು ರೂಪಿಸಿ ಅಲ್ಲಿ ಶಿಲ್ಪಕಲೆಗಳ ವಿಶಾಲ ತರಬೇತಿ, ಪ್ರದರ್ಶನ ಹಾಗೂ ಮಾರಾಟ ಕೇಂದ್ರ ಸ್ಥಾಪಿಸಬೇಕು. ಸಮುದಾಯಕ್ಕೆ ಹೆಚ್ಚಿನ ಬಲ ತುಂಬಬೇಕು’ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ.ಶ್ರೀಕಂಠಾಚಾರ್ ಅವರು ಉಪನ್ಯಾಸ ನೀಡಿದರು.

‘ಟೆಂಡರ್ನಲ್ಲಿ ನೇರ ಭಾಗಿಗೆ ಅವಕಾಶ ನೀಡಿ’

‘ಕಟ್ಟಡ ಕಾಮಗಾರಿಗಳ ಟೆಂಡರ್ ಪಡೆಯಲು ಗುತ್ತಿಗೆದಾರರಿಗೆ ಅವಕಾಶವಿದೆ. ವಿಶ್ವಕರ್ಮ ಸಮುದಾಯದವರು ನೇರವಾಗಿ ಭಾಗಿಯಾಗಲು ಲೋಕೋಪಯೋಗಿ ಇಲಾಖೆಯಲ್ಲಿ ಅವಕಾಶ ಮಾಡಿಕೊಡಿ. ಸಂಕಷ್ಟದಲ್ಲಿರುವ ಸಮುದಾಯದವರ ಕೈ ಹಿಡಿಯುವ ಕೆಲಸ ಸರ್ಕಾರದಿಂದಲೇ ಆಗಬೇಕು’ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.