ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ‘ವಿಸ್ಟಾಡೋಮ್‌‘ ಕಲರವ !

Last Updated 11 ಜುಲೈ 2021, 20:45 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರಿನಿಂದ ಹೊರಟಿದ್ದ ‘ವಿಸ್ಟಾಡೋಮ್‌’ ಕೋಚ್‌ ರೈಲು ಭಾನುವಾರ ರಾತ್ರಿ 8.05ಕ್ಕೆ ನಗರದ ಯಶವಂತಪುರಕ್ಕೆ ಬಂದಿತು. ಈ ರೈಲಿನಲ್ಲಿನ ತಮ್ಮ ಮೊದಲ ಪ್ರಯಾಣದ ಅನುಭವವನ್ನು ಪ್ರಯಾಣಿಕರು ಹಂಚಿಕೊಂಡರು.

‘ನಿಸರ್ಗ ಸೌಂದರ್ಯವನ್ನು ವಿಭಿನ್ನವಾಗಿ ಕಣ್ತುಂಬಿಕೊಂಡಂತಾಯಿತು. ಹೊಸ ಹುರುಪಿನೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವಷ್ಟು ಉತ್ಸಾಹವನ್ನು ಈ ಪ್ರಯಾಣ ನೀಡಿತು’ ಎಂದು ಪ್ರಯಾಣಿಕ ವಿನೋದ್‌ ಹೇಳಿದರು.

ಕಾರವಾರಕ್ಕೂ ಹೊರಡಲಿದೆ ‘ವಿಸ್ಟಾಡೋಮ್‌’

ಇದೇ ಸೋಮವಾರದಿಂದ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು ಕೂಡ ‌‘ವಿಸ್ಟಾಡೋಮ್ ಕೋಚ್’ ನೊಂದಿಗೆ ಪ್ರಯಾಣ ಆರಂಭಿಸಲಿದೆ. ಈ ರೈಲಿನಲ್ಲಿ ಪ್ರಯಾಣಿಸುವ ಮೂಲಕವೂ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಬಹುದು.

ಬೆಳಿಗ್ಗೆ 7 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ (06211) ಈ ವಿಶೇಷ ರೈಲು ಹೊರಡಲಿದೆ. ಈ ರೈಲಿಗೆ ಎರಡು ವಿಸ್ಟಾಡೋಮ್ ಕೋಚ್ ಅಳವಡಿಸಲಾಗಿದೆ. ಪ್ರತಿ ಕೋಚ್ 44 ಆಸನ ಸಾಮರ್ಥ್ಯ ಹೊಂದಿದೆ. ಭಾನುವಾರ ರಾತ್ರಿ ಎಂಟು ಗಂಟೆ ವೇಳೆಗಾಗಲೇ 54 ಮಂದಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ.

ವಿಸ್ಟಾಡೋಮ್‌: ಬೆಂಗಳೂರು–ಮಂಗಳೂರು ಪ್ರಯಾಣ ದರ

ಹವಾನಿಯಂತ್ರಿತ ಬೋಗಿ; ₹1,395

ಸಾಮಾನ್ಯ ಚೇರ್‌ ಕಾರ್‌; ₹560

ಸಾಮಾನ್ಯ ಬೋಗಿ ದ್ವಿತೀಯ ದರ್ಜೆ; ₹155

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT